ನವದೆಹಲಿ: ದೇಶದ ಜನರನ್ನು ಸದೃಢರನ್ನಾಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ʼಫಿಟ್ ಇಂಡಿಯಾʼ ಚಳುವಳಿಯನ್ನು ದೇಶದಾದ್ಯಂತ ಆರಂಭಿಸಿದೆ. ಇದರ ಭಾಗವಾಗಿ ಮೋದಿ ʼಫಿಟ್ನೆಸ್ ಕಾ ಡೋಜ್, ಆಧಾ ಘಂಟಾ ರೋಜ್’ ಕರೆಯನ್ನು ನೀಡಿದ್ದು, ದೇಶವ್ಯಾಪಿ ಸೈಕ್ಲೋಥಾನ್ ಅನ್ನು ಆಯೋಜನೆಗೊಳಿಸಿದೆ.
ಈ ಅಭಿಯಾನವನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.
ʼಫಿಟ್ನೆಸ್ ಕಾ ಡೋಜ್, ಆಧಾ ಘಂಟಾ ರೋಜ್’ ಎಂಬ ಫಿಟ್ನೆಸ್ ಅಭಿಯಾನದ ಮೂಲಕ ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವ ಭಾರತದ ಉಪಕ್ರಮವನ್ನು ಶ್ಲಾಘಿಸುವುದಾಗಿ ಡಬ್ಲ್ಯುಎಚ್ಒ ಹೇಳಿದೆ.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರೆನ್ ರಿಜ್ಜು ಅವರು ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಚಳವಳಿಯ ಅಂಗವಾಗಿ ಪ್ರಾರಂಭಿಸಿದ ಈ ಅಭಿಯಾನವು ಬಾಲಿವುಡ್ ಮಂದಿ, ಕ್ರೀಡಾಪಟುಗಳು, ಬರಹಗಾರರು, ವೈದ್ಯರು ಮತ್ತು ಫಿಟ್ನೆಸ್ ಪ್ರಭಾವಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳ ಬೆಂಬಲವನ್ನು ಗಳಿಸಿದೆ.
ಪ್ರತಿದಿನ 30 ನಿಮಿಷಗಳ ಫಿಟ್ನೆಸ್ ಮಂತ್ರವನ್ನು ಅನುಸರಿಸುವಂತೆ ಮೋದಿ ಭಾರತೀಯರನ್ನು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.