ನವದೆಹಲಿ: ಅತ್ಯಾಚಾರ, ಆ್ಯಸಿಡ್ ದಾಳಿ ಮತ್ತು ಮಕ್ಕಳ ಮೇಲಿನ ದೌರ್ಜನ್ಯದಂತಹ ಗಂಭೀರ ಅಪರಾಧಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಯ ನಿಬಂಧನೆಗಳನ್ನು ಒಳಗೊಂಡಿರುವ ಶಕ್ತಿ ಅಪರಾಧ ಕಾನೂನು ಮಸೂದೆಗಳ ಕರಡನ್ನು ಮಹಾರಾಷ್ಟ್ರ ಸಂಪುಟ ಬುಧವಾರ ಅಂಗೀಕರಿಸಿದೆ.
ಮಹಾರಾಷ್ಟ್ರ ಶಕ್ತಿ ಅಪರಾಧ ಕಾನೂನು (ಮಹಾರಾಷ್ಟ್ರ ತಿದ್ದುಪಡಿ) ಕಾಯ್ದೆ, 2020 ಮತ್ತು ಶಕ್ತಿ ಅಪರಾಧ ಕಾನೂನು ಅನುಷ್ಠಾನಕ್ಕೆ ವಿಶೇಷ ನ್ಯಾಯಾಲಯ ಮತ್ತು ಯಾಂತ್ರಿಕ ವ್ಯವಸ್ಥೆ ಮಸೂದೆಯನ್ನು ಸೋಮವಾರ ಪ್ರಾರಂಭವಾಗುವ ವಿಧಾನಸಭೆಯ ಎರಡು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಕಳೆದ ಡಿಸೆಂಬರ್ನಲ್ಲಿ ಮಹಾರಾಷ್ಟ್ರ ಸರ್ಕಾರವು ಆಂಧ್ರಪ್ರದೇಶದ ದಿಶಾ ಕಾಯಿದೆಯ ಅನ್ವಯ, 10 ರಿಂದ 20 ವರ್ಷಗಳ ಜೈಲು ಶಿಕ್ಷೆಗೆ ಬದಲಾಗಿ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ಕಾನೂನನ್ನು ತರಲಾಗುತ್ತದೆ ಎಂದು ಘೋಷಿಸಿತ್ತು.
ಕರಡು ಮಸೂದೆಗಳು ನಿಗದಿತ ಸಮಯದೊಳಗೆ ತನಿಖೆ ಮತ್ತು ವಿಚಾರಣೆಯನ್ನು ಪೂರ್ಣಗೊಳಿಸಲು ಅವಕಾಶ ಒದಗಿಸುತ್ತದೆ. ಅಲ್ಲದೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಪ್ರಕರಣಗಳ ತನಿಖೆ ಮತ್ತು ವಿಚಾರಣೆಗೆ ವಿಶೇಷ ಪೊಲೀಸ್ ತಂಡಗಳು ಮತ್ತು ಪ್ರತ್ಯೇಕ ನ್ಯಾಯಾಲಯಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.