ಮುಂಬಯಿ: ಜಿಯೋ ಭಾರತದಲ್ಲಿ 5 ಜಿ ಸೇವೆಗಳನ್ನು ಜೂನ್ 2021 ರೊಳಗೆ ಬಿಡುಗಡೆ ಮಾಡಲಿದೆ ಎಂದು ರಿಲಾಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಇಂದು ಘೋಷಿಸಿದ್ದಾರೆ. ಇದು ಭಾರತೀಯ ಟೆಲಿಕಾಂ ಉದ್ಯಮ ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿನ ಪ್ರಮುಖ ಬೆಳವಣಿಗೆಯಾಗಿದೆ.
ಭಾರತದಲ್ಲಿ 5 ಜಿ ಸ್ಪೆಕ್ಟ್ರಮ್ ಹರಾಜು ವಿಷಯದಲ್ಲಿ ಸ್ಪಷ್ಟತೆಯ ಕೊರತೆಯಿದೆ. ಆರಂಭದಲ್ಲಿ, 5 ಜಿ ಸ್ಪೆಕ್ಟ್ರಮ್ ಟೆಸ್ಟಿಂಗ್ ಮತ್ತು ನಂತರ ಹರಾಜನ್ನು 2020ರ ಆರಂಭದಲ್ಲಿ ನಿರೀಕ್ಷಿಸಲಾಗಿತ್ತು, ಆದರೆ ನೀತಿ ವಿಳಂಬಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಈ ಪ್ರಕ್ರಿಯೆ ಮುಂದುವರೆಯಲೇ ಇಲ್ಲ.
ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ 5 ಜಿ ಸ್ಪೆಕ್ಟ್ರಮ್ ಹರಾಜು 2021 ರ ಆರಂಭದಲ್ಲಿ ಸಂಭವಿಸುತ್ತದೆ ಎಂದು ನಿರೀಕ್ಷಿಸುತ್ತಿದೆ. ವಿಶೇಷವೆಂದರೆ, ಮೀಸಲು ಬೆಲೆ ತುಂಬಾ ಹೆಚ್ಚಿದ್ದರೆ ನಮ್ಮ ಕಂಪನಿಯು 5 ಜಿ ಸ್ಪೆಕ್ಟ್ರಮ್ಗೆ ಬಿಡ್ ಮಾಡುವುದಿಲ್ಲ ಎಂದು ಅದರ ಸಿಇಒ ಗೋಪಾಲ್ ವಿಠಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.