ನವದೆಹಲಿ: ಟ್ವಿಟರ್ ಮಂಗಳವಾರ ರಾಜಕೀಯ, ಉದ್ಯಮ ಮತ್ತು ಕ್ರೀಡಾ ಕ್ಷೇತ್ರದಲ್ಲಿ 2020 ರ ಗೋಲ್ಡನ್ ಟ್ವೀಟ್ಗಳನ್ನು ಘೋಷಿಸಿದೆ. ಈ ಟ್ವೀಟ್ಗಳು ಸಾರ್ವಜನಿಕ ವ್ಯಕ್ತಿಗಳಿಂದ ಮಾಡಲ್ಪಟ್ಟಿದ್ದು, ಈ ವರ್ಷದ ಜನವರಿ 1 ಮತ್ತು ನವೆಂಬರ್ 15 ರ ನಡುವೆ ಹೆಚ್ಚಿನ ಸಂಖ್ಯೆಯ ಲೈಕ್ಗಳು, ರಿಟ್ವೀಟ್ಗಳು ಅಥವಾ ಪ್ರತಿಕ್ರಿಯೆಗಳನ್ನು ಗಳಿಸಿದವುಗಳಾಗಿವೆ.
ಟ್ವಿಟ್ಟರ್ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ‘ಲೈಟ್ ಎ ಲ್ಯಾಂಪ್’ ಟ್ವೀಟ್ ರಾಜಕೀಯದ ವಿಭಾಗದಲ್ಲಿ ಹೆಚ್ಚು ರಿಟ್ವೀಟ್ ಮಾಡಲ್ಪಟ್ಟಿದೆ. ಹೀಗಾಗಿ ಇದು ಗೋಲ್ಡನ್ ಟ್ವೀಟ್ ಅಗಿ ಘೋಷಿಸಲ್ಪಟ್ಟಿದೆ.
ಪ್ರಧಾನಿ ಮೋದಿ ಅವರು ದೀಪ ಹೊತ್ತಿಸುವ ಚಿತ್ರಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಕೊರೋನಾ ಯೋಧರ ಗೌರವಾರ್ಥ ಮನೆಯ ಎಲ್ಲಾ ದೀಪಗಳನ್ನು ಸ್ವಿಚ್ ಆಫ್ ಮಾಡಿ ಮತ್ತು ದೀಪವನ್ನು ಬೆಳಗಿಸಿ ಎಂದು ಮೋದಿ ಕರೆ ನೀಡಿದ ಸಂದರ್ಭದ ಟ್ವಿಟ್ ಇದಾಗಿದೆ.
ಈ ಟ್ವೀಟ್ ಅನ್ನು 118.4 ಕೆ ಬಾರಿ ರಿಟ್ವೀಟ್ ಮಾಡಲಾಗಿದೆ ಮತ್ತು 513.2 ಕೆ ಲೈಕ್ಗಳನ್ನು ಪಡೆದುಕೊಂಡಿದೆ.
ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಅವರು ನಿವೃತ್ತಿ ಘೋಷಣೆ ಮಾಡಿದ ಸಂದರ್ಭ ಮೋದಿ ಕಳುಹಿಸಿದ್ದ ಶ್ಲಾಘನಾ ಪತ್ರವನ್ನು ಟ್ವಿಟ್ ಮಾಡಿದ್ದರು. ಇದು ಕೂಡ ಕ್ರೀಡಾ ಕ್ಷೇತ್ರದ ಗೋಲ್ಡನ್ ಟ್ವಿಟ್ ಎನಿಸಿಕೊಂಡಿದೆ.
ಕೋವಿಡ್ ಬಿಕ್ಕಟ್ಟಿಗೆ ಕೊಡುಗೆ ನೀಡುವ ಬಗ್ಗೆ ರತನ್ ಟಾಟಾ ಮಾಡಿರುವ ಟ್ವಿಟ್ ಕೂಡ ಉದ್ಯಮ ವಲಯದ ಗೋಲ್ಡನ್ ಟ್ವೀಟ್ ಎನಿಸಿಕೊಂಡಿದೆ.
शुभं करोति कल्याणमारोग्यं धनसंपदा ।
शत्रुबुद्धिविनाशाय दीपज्योतिर्नमोऽस्तुते ॥ pic.twitter.com/4DeiMsCN11— Narendra Modi (@narendramodi) April 5, 2020
An Artist,Soldier and Sportsperson what they crave for is appreciation, that their hard work and sacrifice is getting noticed and appreciated by everyone.thanks PM @narendramodi for your appreciation and good wishes. pic.twitter.com/T0naCT7mO7
— Mahendra Singh Dhoni (@msdhoni) August 20, 2020
The COVID 19 crisis is one of the toughest challenges we will face as a race. The Tata Trusts and the Tata group companies have in the past risen to the needs of the nation. At this moment, the need of the hour is greater than any other time. pic.twitter.com/y6jzHxUafM
— Ratan N. Tata (@RNTata2000) March 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.