ನವದೆಹಲಿ: ಪರಿಸರ ಸಚಿವಾಲಯದ ವಿಷನ್ 2024 ರ ಯೋಜನೆಯ ಭಾಗವಾಗಿ ದೆಹಲಿ ರಾಷ್ಟ್ರೀಯ ಮೃಗಾಲಯವನ್ನು ಜಾಗತಿಕ ಮಾನದಂಡಗಳಿಗೆ ನವೀಕರಿಸಲಾಗಿದೆ. ಇಂದು ನಡೆದ ಕೇಂದ್ರ ಮೃಗಾಲಯ ಪ್ರಾಧಿಕಾರ ಸಭೆಯಲ್ಲಿ ಇದರ ಮಾನ್ಯತೆಯನ್ನು ಅನುಮೋದಿಸಲಾಗಿದೆ.
ಈ ಪ್ರಾಣಿಸಂಗ್ರಹಾಲಯಗಳಲ್ಲಿನ ಅತ್ಯಾಧುನಿಕ ಸೌಲಭ್ಯಗಳು ಜನರನ್ನು ಪ್ರಕೃತಿಗೆ ಹತ್ತಿರವಾಗಿಸಲು ಸಹಾಯ ಮಾಡಲಿದೆ ಎಂದು ಸಚಿವಾಲಯ ಅಭಿಪ್ರಾಯಿಸಿದೆ.
ದೇಶದಲ್ಲಿ ಆಯ್ದ 15 ಪ್ರಾಣಿ ಸಂಗ್ರಹಾಲಯಗಳನ್ನು ಜಾಗತಿಕ ಮಟ್ಟಕ್ಕೆ ಏರಿಸುವ 10 ವರ್ಷಗಳ ದೂರದೃಷ್ಟಿ ಯೋಜನೆಯನ್ನು ಅಭಿವೃದ್ಧಿಪಡಿಸುವಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ.
ಈ ಯೋಜನೆಯ ಭಾಗವಾಗಿ ಆಧುನೀಕರಣದಲ್ಲಿ ಹೂಡಿಕೆ ಮಾಡಲು ಉನ್ನತ ಭಾರತೀಯ ಮತ್ತು ವಿದೇಶಿ ಪ್ರಾಣಿಸಂಗ್ರಹಾಲಯಗಳು ಮತ್ತು ಕಾರ್ಪೊರೇಟ್ ವಲಯವನ್ನು ಆಕರ್ಷಿಸಲು ಆಶಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.