ಉಪ್ಪಿನಂಗಡಿ: ಗೋವುಗಳನ್ನು ಸಾಕುವುದು ಕಷ್ಟವಾದರೆ ಅವುಗಳನ್ನು ಕಟುಕರ ಕೈಗೊಪ್ಪಿಸಬೇಡಿ, ನಮಗೆ ನೀಡಿ ಎಂಬ ಅಭಿಯಾನದಡಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಪುತ್ತೂರು, ಸುಳ್ಯ, ಕಡಬ ಮೊದಲಾದೆಡೆಗಳಿಂದ ಸಂರಕ್ಷಣೆ ಮಾಡಿದ 166 ಗೋವುಗಳನ್ನು, ತುಮಕೂರಿನ ಮಹಾನಂದಿ ಗೋ ಶಾಲೆಗೆ ಕಳುಹಿಸುವ ಮೂಲಕ ಮಾದರಿಯಾಗಿದ್ದಾರೆ.
ಈ ಎಲ್ಲಾ ಗೋವುಗಳನ್ನು ಗೋ ಶಾಲೆಗೆ ಸ್ಥಳಾಂತರ ಮಾಡುವ ಮುನ್ನ ಕಾಂಚನದ ಪಶುವೈದ್ಯರ ಬಳಿ ಪರೀಕ್ಷೆ ಮಾಡಿಸಿದ್ದಾರೆ. ಬಳಿಕ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಲಾರಿಗಳ ಮೂಲಕ ತುಮಕೂರಿನ ಗೋ ಶಾಲೆಗೆ ರವಾನಿಸಲಾಗಿದೆ.
ಈ ಮಾದರಿ ಕೆಲಸದಲ್ಲಿ ಬಜರಂಗದಳದ ಜಿಲ್ಲಾ ಗೋ ರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು, ಸಂತೋಷ್ ದೋಳ, ರಕ್ಷಿತ್ ದೋಳ, ತೀರ್ಥೇಶ್ ಮೀನಾಡಿ, ಪ್ರವೀಣ್ ಕೇಪು, ಮಹೇಶ್ ನಂಡುಗುರಿ, ನಯನ್ ಕೋಡಿಂಬಾಳ, ನವೀನ್ ಎಲಿಮಲೆ, ಸನತ್ ಚೊಕ್ಕಾಡಿ, ವರ್ಷಿತ್ ಚೊಕ್ಕಾಡಿ, ಅರವಿಂದ್ ಸುಳ್ಯ, ವಿಘ್ನೇಶ್, ರಾಜೇಶ್, ಜಿತೇಶ್ ಬಲ್ನಾಡ್, ಕಿರಣ್ ರಾಮಕುಂಜ, ಹರ್ಷಿತ್ ಬಲ್ನಾಡ್, ಜೀವನ್ ಬಲ್ನಾಡ್, ಶರತ್ ಬಲ್ನಾಡ್, ಹೇಮಂತ್, ಜಯರಾಮ ಕಾಂಚನ, ಕಿಶನ್ ಕಾಂಚನ, ಪ್ರಸಾದ್, ಜಗದೀಶ್, ನವೀನ್ ಮೊದಲಾದವರು ಕಾರ್ಯ ನಿರ್ವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.