ನವದೆಹಲಿ: ಗಡಿ ಉದ್ವಿಗ್ನತೆಯ ನಡುವೆ 2020 ರ ಜನವರಿ-ನವೆಂಬರ್ನಲ್ಲಿ ಭಾರತಕ್ಕೆ ಚೀನಾ ಮಾಡುವ ರಫ್ತು ಶೇ.13 ರಷ್ಟು ಕುಸಿದಿದೆ ಎಂದು ಚೀನಾದ ಕಸ್ಟಮ್ ಡೇಟಾ ತೋರಿಸಿದೆ. ಈ ಬಗ್ಗೆ ಮೂಲಗಳು ವರದಿ ಮಾಡಿವೆ.
ಇದಕ್ಕೆ ವ್ಯತಿರಿಕ್ತವಾಗಿ, ಆ ಅವಧಿಯಲ್ಲಿ ಚೀನಾಗೆ ಭಾರತ ಮಾಡುವ ರಫ್ತು ಶೇಕಡಾ 16 ರಷ್ಟು ಹೆಚ್ಚಾಗಿದೆ.
ಈ ವರ್ಷದ ಮೊದಲ 11 ತಿಂಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರವು $78 ಬಿಲಿಯನ್ ಆಗಿತ್ತು, ಇದು 2019 ರಲ್ಲಿ 92.68 ಬಿಲಿಯನ್ ಡಾಲರ್ ಆಗಿತ್ತು. ಇದಲ್ಲದೆ, ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆಯು ಜನವರಿ-ನವೆಂಬರ್ 2020 ರಲ್ಲಿ $20 ಬಿಲಿಯನ್ ಇಳಿದು $40 ಬಿಲಿಯನ್ ಆಗಿತ್ತು.
2020ರ ಜನವರಿ-ನವೆಂಬರ್ ಅವಧಿಯಲ್ಲಿ ಚೀನಾ 59 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಭಾರತಕ್ಕೆ ರಫ್ತು ಮಾಡಿದೆ, ಇದು ಶೇಕಡಾ 13 ರಷ್ಟು ಕುಸಿತವನ್ನು ದಾಖಲಿಸಿದೆ. ಮತ್ತೊಂದೆಡೆ, ನರೇಂದ್ರ ಮೋದಿ ನೇತೃತ್ವದ ಭಾರತ ಆಮದು ಶೇಕಡಾ 16 ರಷ್ಟು ಏರಿಕೆಯಾಗಿ 19 ಬಿಲಿಯನ್ ಡಾಲರ್ಗಳಿಗೆ ತಲುಪಿದೆ.
ಚೀನಾದ ಅಪ್ರಚೋದಿತ ಆಕ್ರಮಣಕ್ಕೆ ಬೆಸತ್ತು ಭಾರತದಲ್ಲಿ ಅನೇಕರು ಚೀನಾದ ಸರಕುಗಳನ್ನು ಬಹಿಷ್ಕರಿಸುವ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಇದು ಆಮದು ಇಳಿಕೆಗೆ ಪೂರಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.