ನವದೆಹಲಿ: 2020ರ ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿಯನ್ನು ‘ಇನ್ವೆಸ್ಟ್ ಇಂಡಿಯಾ’ ಪಡೆದುಕೊಂಡಿದೆ. ಈ ಬಗ್ಗೆ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶ (ಯುಎನ್ಸಿಟಿಎಡಿ) ಘೋಷಣೆ ಮಾಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ಜಿನೀವಾದ ಯುಎನ್ಸಿಟಿಎಡಿ ಪ್ರಧಾನ ಕಚೇರಿಯಲ್ಲಿ ನಡೆಯಿತು. ಈ ಪ್ರಶಸ್ತಿಯು ವಿಶ್ವದ ಅತ್ಯುತ್ತಮ ಹೂಡಿಕೆ ಪ್ರಚಾರ ಏಜೆನ್ಸಿಗಳ ಅತ್ಯುತ್ತಮ ಸಾಧನೆಗಳನ್ನು ಗುರುತಿಸುತ್ತದೆ ಮತ್ತು ಆಚರಿಸುತ್ತದೆ. ಪ್ರಶಸ್ತಿಯು ವಿಶ್ವದಾದ್ಯಂತ 180 ರಾಷ್ಟ್ರೀಯ ಹೂಡಿಕೆ ಪ್ರಚಾರ ಏಜೆನ್ಸಿಗಳು ಕೈಗೊಂಡ ಕೆಲಸದ ಬಗ್ಗೆ ಯುಎನ್ಸಿಟಿಎಡಿ ಮಾಡಿದ ಮೌಲ್ಯಮಾಪನವನ್ನು ಆಧರಿಸಿದೆ.
ಕೋವಿಡ್-19 ಸಾಂಕ್ರಾಮಿಕವು ಹೂಡಿಕೆ ಉತ್ತೇಜನ ಸಂಸ್ಥೆಗಳಿಗೆ ಪ್ರಮುಖ ಸವಾಲುಗಳನ್ನು ಸೃಷ್ಟಿಸಿತ್ತು. ಆದರೂ ಇನ್ವೆಸ್ಟ್ ಇಂಡಿಯಾ ಅತ್ಯುತ್ತಮವಾದ ಸಾಧನೆಯನ್ನೇ ಮಾಡಿದೆ.
“ಯುಎನ್ಸಿಟಿಎಡಿ ನೀಡಿದ 2020 ರ ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಇನ್ವೆಸ್ಟ್ ಇಂಡಿಯಾಗೆ ಅಭಿನಂದನೆಗಳು. ಭಾರತವನ್ನು ವಿಶ್ವದ ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡುವ ಮತ್ತು ಸುಲಲಿತ ವ್ಯಾಪಾರವನ್ನು ಸುಧಾರಿಸುವಲ್ಲಿ ನಮ್ಮ ಸರ್ಕಾರದ ಸಾಧನೆಗೆ ಇದು ಸಾಕ್ಷಿಯಾಗಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Congratulations to @investindia for winning the 2020 United Nations Investment Promotion Award given by @UNCTAD. This is a testimony to our government’s focus on making India the world’s preferred investment destination & improving ease of doing business.
— Narendra Modi (@narendramodi) December 8, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.