ನವದೆಹಲಿ: ಸಶಸ್ತ್ರ ಪಡೆಗಳು ಮತ್ತು ಅದರ ಯೋಧರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಗೌರವಿಸಲು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಸಕ್ತ ಡಿಸೆಂಬರ್ ತಿಂಗಳನ್ನು “ಗೌರವ್ ಮಾಹ್” (ಹೆಮ್ಮೆಯ ತಿಂಗಳು) ಎಂದು ಆಚರಿಸಲಿವೆ.
ಸಶಸ್ತ್ರ ಪಡೆಗಳ ಧ್ವಜ ದಿನದ ಮುನ್ನಾದಿನದಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಘೋಷಣೆಯನ್ನು ಮಾಡಿದ್ದರು.
ಡಿಸೆಂಬರ್ ಸಂಪೂರ್ಣ ತಿಂಗಳನ್ನು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೈನಿಕ್ ಮಂಡಳಿಯ ಮೂಲಕ ಗೌರವ್ ಮಾಹ್ ಎಂದು ಆಚರಿಸಲಿವೆ ಎಂದಿದ್ದಾರೆ.
ದೇಶದ ರಕ್ಷಣೆಯಲ್ಲಿ ಸೇನಾ ಪಡೆಗಳ ಯೋಧರು ಅಪ್ರತಿಮ ತ್ಯಾಗ, ಸಾಹಸವನ್ನು ಪ್ರದರ್ಶಿಸಿದ್ದಾರೆ. ಅವರ ಗೌರವಾರ್ಥ ಇಡೀ ತಿಂಗಳನ್ನು ʼಗೌರವ್ ಮಾಹ್ʼ ಆಗಿ ಆಚರಿಸುವ ಕೇಂದ್ರದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.