ನವದೆಹಲಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲ್ಲು ದಾಟಿದೆ. ಇಲ್ಲಿಯವರೆಗೆ 90 ಲಕ್ಷಕ್ಕೂ ಹೆಚ್ಚು ಜನರು ಚೇತರಿಕೆಯನ್ನು ಕಂಡಿದ್ದು, ಚೇತರಿಕೆಯ ಪ್ರಮಾಣವು ಇನ್ನೂ 94.20%ಕ್ಕೆ ಸುಧಾರಿಸಿದೆ. ದೇಶದಲ್ಲಿ ಒಟ್ಟು ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ 22 ಪಟ್ಟು ಹೆಚ್ಚಾಗಿದೆ.
ದೈನಂದಿನ ಸಕಾರಾತ್ಮಕ ಪ್ರಕರಣಗಳು ಸತತ 27 ದಿನಗಳಿಂದ 50 ಸಾವಿರಕ್ಕಿಂತ ಕೆಳಗಿವೆ. ಕಳೆದ 24 ಗಂಟೆಗಳಲ್ಲಿ, ಸುಮಾರು 36 ಸಾವಿರ 500 ಹೊಸ ಪ್ರಕರಣಗಳು ವರದಿಯಾಗಿದ್ದು, ಸುಮಾರು 43 ಸಾವಿರ ಜನರು ಒಂದೇ ಅವಧಿಯಲ್ಲಿ ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ.
ದೇಶದ ಒಟ್ಟು ಸಕ್ರಿಯ ಪ್ರಕರಣಗಳು ನಿನ್ನೆ ನಾಲ್ಕು ಲಕ್ಷ 16 ಸಾವಿರ 82 ರಷ್ಟಿದ್ದು, ಇದು ಒಟ್ಟು ವರದಿಯಾದ ಪ್ರಕರಣಗಳ ಕೇವಲ 4.35 ರಷ್ಟಾಗಿದೆ.
ಕಳೆದ 24 ಗಂಟೆಗಳಲ್ಲಿ 540 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.