ನವದೆಹಲಿ: ಮಲೇರಿಯಾ ಹೊರೆ ಕಡಿಮೆ ಮಾಡುವಲ್ಲಿ ಭಾರತವು ಅದ್ಭುತ ಫಲಿತಾಂಶ ಗಳಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಡಬ್ಲ್ಯುಎಚ್ಒ ಬಿಡುಗಡೆ ಮಾಡಿದ ವಿಶ್ವ ಮಲೇರಿಯಾ ವರದಿ 2020 ರ ಪ್ರಕಾರ, 2018 ಕ್ಕೆ ಹೋಲಿಸಿದರೆ 2019 ರಲ್ಲಿ ಶೇಕಡಾ 17.6 ರಷ್ಟು ಕುಸಿತವನ್ನು ವರದಿ ಮಾಡಿದ ಏಕೈಕ ಮಲೇರಿಯಾ ಪೀಡಿತ ದೇಶ ಭಾರತವಾಗಿದೆ. ವಾರ್ಷಿಕ ರೋಗ ಸಂಭವವು 2017 ಕ್ಕೆ ಹೋಲಿಸಿದರೆ 2018 ರಲ್ಲಿ 27.6 ಶೇಕಡಾ ಕಡಿಮೆಯಾಗಿದೆ ಮತ್ತು 2018 ಕ್ಕೆ ಹೋಲಿಸಿದರೆ 2019ರಲ್ಲಿ ಶೇ.18.4 ರಷ್ಟು ಕಡಿಮೆಯಾಗಿದೆ.
ಪ್ರದೇಶವಾರು ಪ್ರಕರಣಗಳಲ್ಲಿ ಸುಮಾರು 20 ದಶಲಕ್ಷದಿಂದ ಸುಮಾರು 6 ದಶಲಕ್ಷದವರೆಗೆ ಪ್ರಕರಣ ಕುಸಿತಕ್ಕೆ ಭಾರತ ಕಾರಣವಾಗಿದೆ. 2000 ರಿಂದ 2019 ರ ನಡುವೆ ಮಲೇರಿಯಾ ಪ್ರಕರಣಗಳಲ್ಲಿ ಶೇಕಡಾ 71.8 ಮತ್ತು ಸಾವು ಪ್ರಕರಣಗಳಲ್ಲಿ 73.9 ರಷ್ಟು ಕುಸಿದಿದೆ.
2000 ಮತ್ತು 2019 ರ ನಡುವೆ ಭಾರತವು ಮಲೇರಿಯಾ ಕಾಯಿಲೆಯಲ್ಲಿ 83.34 ಶೇಕಡಾ ಮತ್ತು ಮಲೇರಿಯಾ ಮರಣದಲ್ಲಿ 92 ಪ್ರತಿಶತದಷ್ಟು ಕಡಿತವನ್ನು ಸಾಧಿಸಿದೆ.
2015 ರಲ್ಲಿ ದೇಶದಲ್ಲಿ ಮಲೇರಿಯಾ ನಿರ್ಮೂಲನೆ ಪ್ರಯತ್ನಗಳನ್ನು ಪ್ರಾರಂಭಿಸಲಾಯಿತು ಮತ್ತು ಆರೋಗ್ಯ ಸಚಿವಾಲಯವು 2016 ರಲ್ಲಿ ಮಲೇರಿಯಾ ನಿರ್ಮೂಲನೆಗಾಗಿ ನ್ಯಾಷನಲ್ ಫ್ರೇಮ್ವರ್ಕ್ ಪ್ರಾರಂಭಿಸಿದ ನಂತರ ಪ್ರಯತ್ನ ತೀವ್ರಗೊಂಡಿತು. ಮಲೇರಿಯಾ ನಿರ್ಮೂಲನೆಗಾಗಿ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆಯನ್ನು ಆರೋಗ್ಯ ಸಚಿವಾಲಯವು ಜುಲೈ, 2017 ರಲ್ಲಿ ಪ್ರಾರಂಭಿಸಿತು, ಇದು ಮುಂದಿನ ಐದು ವರ್ಷಗಳ ಕಾರ್ಯತಂತ್ರಗಳನ್ನು ರೂಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.