
ಬೆಂಗಳೂರು: ಸಿಬ್ಬಂದಿಗಳಿಗೆ ವೇತನ ನೀಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅಡಿಯಲ್ಲಿ ಅನುಮೋದನೆಗೊಂಡ ವಿವಿಧ ಅನುದಾನಗಳನ್ನು ಬಳಕೆ ಮಾಡಿಕೊಳ್ಳುವಂತೆ ಗ್ರಾಮ ಪಂಚಾಯತ್ಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.
ರಾಜ್ಯದ ಸುಮಾರು 6 ಸಾವಿರಗಳಿಗೂ ಅಧಿಕ ಗ್ರಾಮ ಪಂಚಾಯತ್ಗಳಲ್ಲಿ 53 ಸಾವಿರಕ್ಕೂ ಅಧಿಕ ಮಂದಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂದಾಯ ಸಂಗ್ರಹಕರು, ಡಾಟಾ ಎಂಟ್ರಿ ಆಪರೇಟರ್ಗಳು, ಪೌರ ಕಾರ್ಮಿಕರು ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ವೇತನಕ್ಕೆ ಸಂಬಂಧಿಸಿದಂತೆ 400 ಕೋಟಿ ರೂ. ಗಳು ಕಡಿಮೆಯಾಗುತ್ತಿತ್ತು.
ಆರ್ಡಿಪಿಆರ್ ಅಧಿಕಾರಿಗಳ ಪ್ರಕಾರ ಪಂಚಾಯತ್ ಸಿಬ್ಬಂದಿಗೆ ಪ್ರತಿ ವರ್ಷವೂ ವೇತನ ನೀಡಲು 911 ಕೋಟಿ ರೂ. ಗಳಷ್ಟು ಅಗತ್ಯವಿದೆ. ಈ ವರ್ಷ 500 ಕೋಟಿ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಸಂಬಂಧ ಕೆಲ ದಿನಗಳ ಹಿಂದೆ ಸಚಿವ ಈಶ್ವರಪ್ಪ ಅವರ ಜೊತೆಗೆ ಆರ್ಡಿಪಿಆರ್ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ಮಾತುಕತೆಯನ್ನು ಸಹ ನಡೆಸಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಆರ್ಥಿಕ ಹಿಂಜರಿತವಾಗಿರುವುದರ ಬಗೆಗೂ ಅಧಿಕಾರಿಗಳು ಗಮನಕ್ಕೆ ತಂದಿದ್ದರು.
ಪಂಚಾಯತ್ ಚುನಾವಣೆ ದಿನಾಂಕ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಆರ್ಡಿಪಿಆರ್ ಇಲಾಖೆ ಎಲ್ಲಾ ಪಂಚಾಯತ್ಗಳಿಗೆ ಪ್ರತ್ಯೇಕವಾದ ಬ್ಯಾಂಕ್ ಖಾತೆಗಳನ್ನು ಹೊಂದುವಂತೆಯೂ ಸೂಚಿಸಿತ್ತು. ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಪಂಚಾಯತ್ಗಳಿಗೂ ಹಣದ ಹಂಚಿಕೆ ಮಾಡಲಾಗಿದೆ. ಎಂಎನ್ಆರ್ಇಜಿಎ 15 ನೇ ಹಣಕಾಸು ಆಯೋಗ ಮತ್ತು ಇತರ ಯೋಜನೆಗಳ ಅಡಿಯಲ್ಲಿ ನಿರ್ಧಿಷ್ಟ ಮೊತ್ತವೊಂದನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕಿತ್ತು. ಸದ್ಯ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ಪಂಚಾಯತ್ಗಳಿಗೆ ಬಿಡುಗಡೆಯಾದ ಒಟ್ಟು ನಿಧಿಯ 25% ಹಣವನ್ನು ನೈರ್ಮಲ್ಯೀಕರಣ ಕಾರ್ಯಗಳಿಗೆ ಮಾತ್ರವೇ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಈ ನಿಧಿಯ ಕೆಲವು ಭಾಗವನ್ನು ಪೌರಕಾರ್ಮಿಕರಿಗೆ ಪಾವತಿಸಲು ಬಳಕೆ ಮಾಡುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ 25% ಅನುದಾನವನ್ನು ಕುಡಿಯುವ ನೀರಿನ ಯೋಜನೆಗಳಿಗೆ ಬಳಕೆ ಮಾಡುವಂತೆಯೂ ಸೂಚಿಸಲಾಗಿದೆ. ಉಳಿದ ಹಣವನ್ನು ಡಾಟಾ ಎಂಟ್ರಿ ಆಪರೇಟರ್ಗಳಿಗೆ ವೇತನ ನೀಡಲು ಉಪಯೋಗಿಸುವಂತೆಯೂ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


