ನವದೆಹಲಿ: ಇಂದಿನಿಂದ ತೊಡಗಿದಂತೆ ರಷ್ಯಾ ಅಭಿವೃದ್ಧಿ ಮಾಡಿರುವ ಕೊರೋನಾ ಲಸಿಕೆ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ಭಾರತ ದೇಶದಲ್ಲಿ ಆರಂಭವಾಗಲಿದೆ.
ಈ ಸಂಬಂಧ ಭಾರತದ ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ ಮಾಹಿತಿ ನೀಡಿದ್ದು, ಈ ಲಸಿಕೆ ಎರಡು ಮತ್ತು ಮೂರನೇ ಹಂತದ ಪ್ರಯೋಗವನ್ನು ಆರಂಭ ಮಾಡಿರುವುದಾಗಿಯೂ ತಿಳಿಸಿವೆ. ಸ್ಪುಟ್ನಿಕ್ ವಿ ಲಸಿಕೆ ಕೊರೋನಾ ಸೋಂಕು ಗುಣಪಡಿಸುವಲ್ಲಿ 92% ಗಳಷ್ಟು ಪರಿಣಾಮಕಾರಿಯಾಗಿದೆ ಎಂದು ಆರ್ಡಿಐಎಫ್ ಈ ಹಿಂದೆಯೇ ಪತ್ರಿಕಾ ಪ್ರಕಟಣೆಯಲ್ಲಿಯೂ ಮಾಹಿತಿ ನೀಡಿತ್ತು.
ಕಳೆದ ಆಗಸ್ಟ್ ತಿಂಗಳ 11 ರಂದು ರಷ್ಯಾ ತನ್ನ ಕೊರೋನಾ ಲಸಿಕೆಯನ್ನು ನೋಂದಾಯಿಸಿಕೊಂಡಿತ್ತು. ಅದರೊಂದಿಗೆ ಕೊರೋನಾ ಲಸಿಕೆಯನ್ನು ನೋಂದಾಯಿಸಿಕೊಂಡ ಪ್ರಪಂಚದ ಪ್ರಥಮ ರಾಷ್ಟ್ರ ಎಂಬ ಖ್ಯಾತಿಗೂ ಭಾಜನವಾಗಿತ್ತು. ಈ ಲಸಿಕೆಯನ್ನು ರಷ್ಯಾದ ಗಮಲೆಯಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಲಜಿ ಆ್ಯಂಡ್ ಮೈಕ್ರೋಬಯಾಲಜಿ ಅಭಿವೃದ್ಧಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.