ಹೈದರಾಬಾದ್: “ಪ್ರಧಾನಿ ನರೇಂದ್ರ ಮೋದಿಯವರು ಇಂದು ಹೈದಾರಾಬಾದಿನ ಜಿನೊಮ್ ವ್ಯಾಲಿಯಲ್ಲಿನ ನಮ್ಮ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ್ದು ನಮ್ಮ ತಂಡಕ್ಕೆ ಉತ್ತಮ ಪ್ರೇರಣೆಯಾಗಿದೆ ಮತ್ತು ವೈಜ್ಞಾನಿಕ ಆವಿಷ್ಕಾರದ ಬಗೆಗಿನ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ” ಎಂದು ಭಾರತ್ ಬಯೋಟೆಕ್ ಹೇಳಿದೆ.
“ಪ್ರಧಾನ ಮಂತ್ರಿಯ ಭೇಟಿ ನಮ್ಮ ತಂಡಕ್ಕೆ ಉತ್ತಮ ಪ್ರೇರಣೆಯಾಗಿದೆ ಮತ್ತು ವೈಜ್ಞಾನಿಕ ಅನ್ವೇಷಣೆ, ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕೋವಿಡ್-19 ವಿರುದ್ಧದ ರಾಷ್ಟ್ರದ ಹೋರಾಟದ ಬಗೆಗಿನ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲು ಪೂರಕವಾಗಿದೆ” ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ.
ದೇಶೀಯ ಕೋವಿಡ್ -19 ಲಸಿಕೆ ‘ಕೋವಾಕ್ಸಿನ್’ ಗಾಗಿ ಭಾರತ್ ಬಯೋಟೆಕ್ ಸಂಸ್ಥೆಯು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಕೊವಾಕ್ಸಿನ್ ಪ್ರಸ್ತುತ ಮೂರನೇ ಹಂತದ ಪ್ರಯೋಗಗಳಿಗೆ ಒಳಗಾಗುತ್ತಿದೆ.
ಪ್ರಧಾನಿ ಮೋದಿ ಇಂದು ಪುಣೆ ಮತ್ತು ಅಹ್ಮದಾಬಾದ್ ಕೋವಿಡ್-19 ಲಸಿಕಾ ಕೇಂದ್ರಗಳಿಗೂ ಭೇಟಿಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.