ಅಲಿಘಡ: ಹತ್ಯೆಯಾಗುವುದರಿಂದ ಗೋವುಗಳನ್ನು ರಕ್ಷಿಸುವ ಸಲುವಾಗಿ ಉತ್ತರಪ್ರದೇಶದ ಅಲಿಘಡದ ಕೊಯಿಲ್ ಕ್ಷೇತ್ರದ ಶಾಸಕ ಶಾಸಕರೊಬ್ಬರು ಅಭಿಯಾನ ಆರಂಭಿಸಿದ್ದಾರೆ.
ಗೋವಿನ ಬಗ್ಗೆ ಪ್ರೀತಿ ವ್ಯಕ್ತಪಡಿಸಿರುವ ಇವರು ಬಿಜೆಪಿ ಅಥವಾ ಹಿಂದೂ ಧರ್ಮಿಯ ಶಾಸಕನಲ್ಲ. ಇವರು ಮುಸ್ಲಿಂ ಧರ್ಮೀಯ, ಅದರಲ್ಲೂ ಸಮಾಜವಾದಿ ಪಕ್ಷದ ಶಾಸಕ ಎಂಬುದು ವಿಶೇಷ.
ಹಾಜಿ ಝಮೀರುಲ್ಲಾಹ ಖಾನ್ ಎಂಬುದು ಇವರ ಹೆಸರಾಗಿದ್ದು, ಇವರ ಅಭಿಯಾನದ ಅಂಗವಾಗಿ ಮುಸ್ಲಿಂ ಧರ್ಮ ಗುರುಗಳು ಮಸೀದಿಗಳಿಗೆ ತೆರಳಿ ಗೋ ಹತ್ಯೆ ನಿಷೇಧಿಸುವಂತೆ ಧ್ವನಿ ಎತ್ತಲಿದ್ದಾರೆ.
‘ಹಿಂದೂಗಳು ನಮ್ಮ ಸಹೋದರರು, ಅವರು ಗೋವನ್ನು ಪೂಜಿಸುತ್ತಾರೆ, ನಾವು ಅವರ ಭಾವನೆಗಳನ್ನು ಗೌರವಿಸಬೇಕು’ ಎಂದು ಖಾನ್ ಹೇಳಿದ್ದಾರೆ.
ನಾನು ಖುರಾನ್ ಮತ್ತು ಇಸ್ಲಾಂ ತಜ್ಞರೊಂದಿಗೆ ಚರ್ಚಿಸಿದ್ದೇನೆ, ಇಸ್ಲಾಂನಲ್ಲಿ ಗೋ ಭಕ್ಷಣೆ ಕಡ್ಡಾಯವಲ್ಲ ಎಂದಿದ್ದಾರೆ.
ಖಾನ್ ಅವರ ನೇತೃತ್ವದಲ್ಲಿ ಕಳೆದ ತಿಂಗಳು ಅಲಿಘಢ ಮುಸ್ಲಿಂರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಗೋ ಹತ್ಯೆಯನ್ನು ಖಂಡಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.