ನವದೆಹಲಿ: ಜುಲೈ 25ರಿಂದ ಆಗಷ್ಟ್ 2ರವರೆಗೆ ಅಮೆರಿಕಾದ ಲಾಸ್ ಏಂಜಲೀಸ್ನಲ್ಲಿ ನಡೆದ 2015 ಸ್ಪೆಷಲ್ ಒಲಿಂಪಿಕ್ ವರ್ಲ್ಡ್ ಸಮ್ಮರ್ ಗೇಮ್ಸ್ನಲ್ಲಿ ಭಾರತೀಯರು ಅಮೋಘ ಸಾಧನೆ ಮಾಡಿದ್ದಾರೆ.
ನಮ್ಮ ಕ್ರೀಡಾಳುಗಳು 47 ಬಂಗಾರದ ಪದಕ, 54ಬೆಳ್ಳಿ ಪದಕ, 72ಕಂಚಿನ ಪದಕ ಸೆರಿದಂತೆ ಒಟ್ಟು 173 ಪದಕಗಳನ್ನು ಗೆದ್ದಿದ್ದಾರೆ. 2011ರಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತೀಯರು ಗೆದ್ದ ಪದಕಗಳ ಸಂಖ್ಯೆ 156 ಆಗಿತ್ತು.
ಭಾರತದ ಒಟ್ಟು 275 ಕ್ರೀಡಾಳುಗಳು ಮತ್ತು 14 ಕೋಚ್ಗಳು ಇದರಲ್ಲಿ ಭಾಗವಹಿಸಿದ್ದರು.
ರಣ್ವೀರ್ ಸಿಂಗ್ ಸೈನಿ ಅವರು ಗಾಲ್ಫ್ನಲ್ಲಿ ಬಂಗಾರದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು, ರೋಲರ್ ಸ್ಕೇಟಿಂಗ್ ಅಥ್ಲೇಟ್ಗಳು 39 ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಕ್ರೀಡೆ ಮತ್ತು ಕ್ರೀಡಾಳುಗಳನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಪಡುತ್ತಿರುವ ನರೇಂದ್ರ ಮೋದಿ ಸರ್ಕಾರ ಸಮ್ಮರ್ ಗೇಮ್ಸ್ನಲ್ಲಿ ಅದ್ಭುತ ಸಾಧನೆ ಮಾಡಿದ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.