ನವದೆಹಲಿ: ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿರುವ ಭಾರತೀಯ ರೈಲ್ವೆಯು, ತನ್ನ ಸರಕು ರೈಲುಗಳಲ್ಲಿನ ಗಾರ್ಡ್ ವ್ಯಾನ್ಗಳನ್ನು ತೆಗೆದುಹಾಕಲು ಹೊಸ ವ್ಯವಸ್ಥೆಯನ್ನು ಅಳವಡಿಸುತ್ತಿದೆ ಮತ್ತು ರೈಲು ಚಲನೆಯಲ್ಲಿರುವಾಗ ಎಲ್ಲಾ ವ್ಯಾಗನ್ಗಳು ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸರಕು ರೈಲುಗಳ ಹಿಂಭಾಗದಲ್ಲಿ ಗಾರ್ಡ್ಗಳನ್ನು ನಿಯೋಜಿಸುತ್ತಿದೆ.
ಈ ತಂತ್ರಜ್ಞಾನ-ಚಾಲಿತ ಉಪಕ್ರಮವು ಗಾರ್ಡ್ ವ್ಯಾನ್ಗಳನ್ನು ಎಂಡ್ ಆಫ್ ಟ್ರೈನ್ ಟೆಲಿಮೆಟ್ರಿ (ಇಒಟಿಟಿ) ವ್ಯವಸ್ಥೆ ಎಂಬ ಅತ್ಯಾಧುನಿಕ ಸಾಧನವನ್ನು ಹೊಂದಿದ ಸಂಪೂರ್ಣ ಲೋಡ್ ವ್ಯಾಗನ್ಗಳೊಂದಿಗೆ ಬದಲಿಸಲು ಉದ್ದೇಶಿಸಿದೆ.
100 ಕೋಟಿ ರೂ.ಗಳ ಯೋಜನೆಯು ಲೋಕೋಮೋಟಿವ್ ಡ್ರೈವರ್ ಮತ್ತು ರೈಲಿನ ಕೊನೆಯ ವ್ಯಾಗನ್ ನಡುವೆ ಉತ್ತಮ ಕಮ್ಯೂನಿಕೇಶನ್ ಸ್ಥಾಪಿಸುವ ಗುರಿಯನ್ನು ಹೊಂದಿರುವ EoTTಯನ್ನು ಖರೀದಿಸಲು ಯೋಜಿಸಿದೆ ಮತ್ತು ಎಲ್ಲಾ ಸರಕು ರೈಲುಗಳಲ್ಲಿ ಇದು ಸಜ್ಜುಗೊಳ್ಳಲಿದೆ.
ರೈಲ್ವೆ ಒಟ್ಟು 1,000 ಸಾಧನಗಳನ್ನು ವಿದೇಶದಿಂದ ಖರೀದಿಸಲಿದ್ದರೆ, ಈ ಹಿಂದೆ ಡೀಸೆಲ್ ಲೋಕೋಮೋಟಿವ್ ವರ್ಕ್ಸ್ ಎಂದು ಕರೆಯಲಾಗುತ್ತಿದ್ದ ವಾರಣಾಸಿಯಲ್ಲಿನ ಬನಾರಸ್ ಲೋಕೋಮೋಟಿವ್ ವರ್ಕ್ಸ್ (ಬಿಎಲ್ಡಬ್ಲ್ಯೂ) ದಕ್ಷಿಣ ಆಫ್ರಿಕಾದಿಂದ 250 EoTTಗಳಿಗೆ ಆರ್ಡರ್ ನೀಡಲಿದೆ.
“ಮೊದಲಿಗೆ, ನಾವು ಮುಂದಿನ ತಿಂಗಳು ಯುಎಸ್ಎ ಮತ್ತು ದಕ್ಷಿಣ ಆಫ್ರಿಕಾದಿಂದ ಅಂತಹ 10 ಸಾಧನಗಳನ್ನು ಪ್ರಾಯೋಗಿಕ ಉದ್ದೇಶಗಳಿಗಾಗಿ ಖರೀದಿಸುತ್ತಿದ್ದೇವೆ, ಎಲ್ಲಾ ಮುಂದುವರಿದ ದೇಶಗಳಲ್ಲಿ ಇಒಟಿಟಿ ವ್ಯವಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
740 ಇಒಟಿಟಿ ಸಾಧನಗಳ ಖರೀದಿ ಪ್ರಕ್ರಿಯೆಯನ್ನು ಮುಂದಿನ ಹಂತದಲ್ಲಿ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ಭಾರತೀಯ ರೈಲು ಜಾಲದಲ್ಲಿ ಸುಮಾರು 7,000 ಸರಕು ರೈಲುಗಳು ಓಡುತ್ತಿದ್ದು, ಸುಮಾರು 16,000 ಗಾರ್ಡ್ಗಳನ್ನು ತೊಡಗಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.