ಚೆನ್ನೈ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಎದೆಯೊಡ್ಡಿ ವೀರ ಸ್ವರ್ಗ ಪಡೆದ ಹುತಾತ್ಮ ಯೋಧ ಮೇಜರ್ ಕೌಸ್ತುಭ್ ಅವರ ಪತ್ನಿ ಕನ್ನಿಕಾ ರಾಣೆ ಸೇನೆಯ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.
49 ವಾರಗಳ ಕಠಿಣ ತರಬೇತಿ ಸಂಪೂರ್ಣಗೊಳಿಸಿರುವ 30 ವರ್ಷದ ಕನ್ನಿಕಾ ಅವರು ಸೇನೆಯ ಲೆಫ್ಟಿನೆಂಟ್ ಆಗುವ ಮೂಲಕ ತಮ್ಮ ಪತಿಯ ಆಸೆಯನ್ನು ಈಡೇರಿಸಿದ್ದಾರೆ. ಚೆನ್ನೈನ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿ 230 ಕೆಡೆಟ್ಗಳೊಂದಿಗೆ ಕನ್ನಿಕಾ ಅವರೂ ಪದವಿ ಸ್ವೀಕರಿಸಿದ್ದಾರೆ.
ಮೇ. ಕೌಸ್ತುಭ್ ಅವರು ಹುತಾತ್ಮರಾದ ಸಂದರ್ಭದಲ್ಲಿ ಅವರ ಪತ್ನಿ ಕನ್ನಿಕಾಗೆ ಮಹಾರಾಷ್ಟ್ರದ ಭಯಾಂಡರ್ ಪಾಲಿಕೆ ಉತ್ತಮ ಉದ್ಯೋಗದ ಆಫರ್ ನೀಡಿತ್ತು. ಆದರೆ ಅವರಿಗೆ ಸೇನೆಗೆ ಸೇರುವ ಆಸಕ್ತಿ. ಈ ಹಿನ್ನೆಲೆಯಲ್ಲಿ ಅವರು ಆ ಉದ್ಯೋಗದ ಆಫರ್ ತಿರಸ್ಕರಿಸಿ ಸೇನೆಗೆ ಸೇರಬೇಕೆಂಬ ಬಯಕೆಯಿಂದ ಫಿಸಿಕಲ್ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಹಾಗೆಯೇ ಹುತಾತ್ಮ ಯೋಧರ ಪತ್ನಿಯರ ಶ್ರೇಣಿಯಲ್ಲಿ ಎಸ್ ಎಸ್ ಬಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿ, ಸೇನೆಗೆ ಸೇರುವ ಕನಸನ್ನು ನನಸಾಗಿಸಿಕೊಂಡರು.
ಇನ್ನು ಇವರ ಈ ಸಾಧನೆಗೆ ಕುಟುಂಬ ವರ್ಗವೂ ಸಂತಸ ವ್ಯಕ್ತಪಡಿಸಿದೆ. ಇವರ ಪತಿ ಕೌಸ್ತುಭ್ ಅವರ ತಾಯಿ, ತಮ್ಮ ಸೊಸೆಯ ಪದಗ್ರಹಣ ಕಾರ್ಯಕ್ರಮ ತಮ್ಮ ಮಗ ಕೌಸ್ತುಭ್ ಅವರ 2011 ರ ಪದಗ್ರಹಣ ಸಮಾರಂಭವನ್ನು ನೆನಪು ಮಾಡಿತು ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.