ನವದೆಹಲಿ: ಅಫ್ಘಾನಿಸ್ಥಾನದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಪಾಕಿಸ್ಥಾನದ ಪ್ರಯತ್ನವನ್ನು ಭಾರತ ತಡೆಗಟ್ಟುತ್ತಲೇ ಬಂದಿದೆ. ಇದೀಗ ಕಾಬೂಲ್ ನದಿಗೆ ಶಾಹತೂತ್ ಅಣೆಕಟ್ಟು ಕಟ್ಟುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ಥಾನದ ಕ್ರಮವನ್ನು ಭಾರತ ನಿರ್ಲಕ್ಷ್ಯ ಮಾಡಿ ಅದಕ್ಕೆ ದಿಟ್ಟ ಉತ್ತರ ನೀಡಿದೆ.
ಕಾಬುಲ್ ನದಿಗೆ ಅಣೆಕಟ್ಟು ಕಟ್ಟಿದರೆ ಪಾಕಿಸ್ಥಾನಕ್ಕೆ ನೀರು ಹರಿಯುವುದು ಕಮ್ಮಿಯಾಗುತ್ತದೆ. ಇದರಿಂದ ಕೃಷಿಗೆ ಸಮಸ್ಯೆಯಾಗುತ್ತದೆ. ಪಾಕಿಸ್ಥಾನದ ಹಲವು ಸಣ್ಣ ನದಿಗಳು ಅಫ್ಘಾನಿಸ್ಥಾನವನ್ನು ಪ್ರವೇಶಿಸುತ್ತವೆ. ಅಲ್ಲಿ ಕಾಬೂಲ್ ನದಿಯನ್ನು ಸೇರಿ ನಂತರ ಪಾಕಿಸ್ಥಾನವನ್ನು ಮತ್ತೆ ಪ್ರವೇಶಿಸುತ್ತದೆ. ಶಾಹತೂತ್ ಅಣೆಕಟ್ಟು ನಿರ್ಮಿಸಿದ್ದರಿಂದ ಈ ನದಿಗಳ ನೀರು ಪಾಕಿಸ್ಥಾನಕ್ಕೆ ಹರಿಯುವುದು ನಿಲ್ಲುತ್ತದೆ ಎಂದು ಪಾಕಿಸ್ಥಾನ ಆಕ್ಷೇಪ ವ್ಯಕ್ತಪಡಿಸಿತ್ತು.
ಆದರೆ ಪಾಕಿಸ್ಥಾನದ ಆಕ್ಷೇಪವನ್ನು ಭಾರತ ನಿರ್ಲಕ್ಷ್ಯ ಮಾಡಿ ಅಫ್ಘಾನಿಸ್ಥಾನದ ಪರವಾಗಿ ನಿಂತಿದೆ.
ಇನ್ನೊಂದೆಡೆ ಅಫ್ಘಾನಿಸ್ಥಾನದ ತಾಲಿಬಾನ್ ಉಗ್ರರ ಜೊತೆ ಶಾಂತಿ ಮಾತುಕತೆ ನಡೆಸಲು ಪಾಕಿಸ್ಥಾನ ಮುಂದಾಗಿದೆ. ಈ ಮೂಲಕ ಅಫ್ಘಾನಿಸ್ಥಾನದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಮುಂದಾಗಿದೆ. ಆದರೆ ಭಾರತ ಶಾಂತಿ ಸ್ಥಾಪನಾ ಪ್ರಕ್ರಿಯೆಯ ಮುಂದಾಳತ್ವ ಅಫ್ಘಾನಿಸ್ಥಾನದ್ದೇ ಆಗಿರಬೇಕು ಎಂದು ಹೇಳಿದೆ. ಈ ಮೂಲಕವೂ ಪಾಕಿಸ್ಥಾನವನ್ನು ಕಟ್ಟಿಹಾಕುವ ಪ್ರಯತ್ನವನ್ನು ಭಾರತ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.