ಇಲಾಟ್ : 2008ರ ನವೆಂಬರ್ 26ರಂದು ಮುಂಬೈ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಇಸ್ರೇಲ್ನಲ್ಲಿ ಸ್ಮಾರಕವೊಂದು ನಿರ್ಮಾಣವಾಗಲಿದೆ. ಇಸ್ರೇಲಿನ ದಕ್ಷಿಣ ಕರಾವಳಿ ನಗರವಾದ ಇಲಾಟ್ನಲ್ಲಿರುವ ಯಹೂದಿ ವಲಸಿಗರ ಸಿತಾರ್ ಸಂಸ್ಥೆಯು ಸ್ಮಾರಕ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ಥಾನ ಮೂಲದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ 10 ಮಂದಿ ಉಗ್ರರು ಮುಂಬೈ ನಗರವನ್ನು ಪ್ರವೇಶಿಸಿ ಸರಣಿ ದಾಳಿಗಳನ್ನು ನಡೆಸಿದ್ದರು. ನಾರಿಮನ್ ಪಾಯಿಂಟ್ ನಲ್ಲಿದ್ದ ‘ದಿ ಮುಂಬೈ ಚಾಬಾದ್ ಹೌಸ್’ ಅನ್ನು ಕೂಡ ಗುರಿಯಾಗಿಸಿದ್ದರು. ಇಲ್ಲಿ ಆರು ಮಂದಿ ಯಹೂದಿಗಳು ಸೇರಿದಂತೆ 166 ಮಂದಿ ಮೃತಪಟ್ಟಿದ್ದರು.
ಇದೀಗ ಮೃತರ ಸ್ಮರಣಾರ್ಥ ಇಲಾಟ್ ನಗರದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇಲಾಟ್ ನಗರದ ಮೇಯರ್ ಮೀರ್ ಇತ್ಜಾಕ್ ಹಾ ಲೇವಿ ಅವರ ಜೊತೆ ಸಿತಾರ ಸಂಸ್ಥೆಯು ಮಾತುಕತೆಯನ್ನು ನಡೆಸಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.