ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಪಾಕಿಸ್ಥಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾನ ಹೊಸ ಅವತಾರ ಎಂದು ಬಿಜೆಪಿ ಯುವಮೋರ್ಚಾ ಮುಖ್ಯಸ್ಥ ಮತ್ತು ಬಿಜೆಪಿ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
“ತೆಲಂಗಾಣದ ಜನರು ಅಭಿವೃದ್ಧಿಗಾಗಿ ಮತಚಲಾಯಿಸಬೇಕು. ವಂಶಾಡಳಿತದ ವಿರುದ್ಧ ಮತ ಚಲಾಯಿಸಬೇಕು. ನಾವು ದೇಶದಲ್ಲಿ ಕುಟುಂಬ ರಾಜಕೀಯವನ್ನು ನಿರ್ಮೂಲನೆ ಮಾಡಿದ್ದೇವೆ. ಕಾಶ್ಮೀರದಲ್ಲಿ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರನ್ನು ಜನರು ಶಾಶ್ವತ ಕ್ವಾರಂಟೈನ್ಗೆ ಕಳುಹಿಸಿದ್ದಾರೆ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರನ್ನು 100 ಸ್ಮಾರ್ಟ್ ಸಿಟಿ ಯೋಜನೆಗಳನ್ನು ಆರಂಭಿಸಿದ್ದಾರೆ. ತೆಲಂಗಾಣಕ್ಕೆ ನೀಡಿದ ಅನುದಾನ ಏನಾಗಿದೆ? ಓವೈಸಿ ಜಿನ್ನಾ ನ ಹೊಸ ಅವತಾರ. ಟಿಆರ್ಎಸ್ ಮತ್ತು ಎಂಐಎಂ ಒಂದೇ ನಾಣ್ಯದ ಎರಡು ಮುಖಗಳು. ಕೆಸಿಆರ್ ಹೈದರಾಬಾದನ್ನು ಇಸ್ತಾಂಬುಲ್ ಆಗಿ ಪರಿವರ್ತಿಸಲು ಬಯಸುತ್ತಿದ್ದಾರೆ. ಟರ್ಕಿ ಶೇಕಡ ನೂರರಷ್ಟು ಇಸ್ಲಾಮಿಕ್ ದೇಶ. ಆದೇಶದ ಮುಖ್ಯಸ್ಥ ಭಾರತದ ವಿರುದ್ಧ ಮಾತನಾಡುತ್ತಾನೆ. ನಾವು ಹೈದರಾಬಾದನ್ನು ಭಾಗ್ಯನಗರವಾಗಿಸುತ್ತೇವೆ, ಆದರೆ ಯಾವುದೇ ಕಾರಣಕ್ಕೂ ಇಸ್ತಾಂಬುಲ್ ಆಗಲು ಬಿಡುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.