ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಂಸತ್ತಿನ ಸದಸ್ಯರಿಗಾಗಿ ನಿರ್ಮಾಣಗೊಂಡಿರುವ ಬಹು ಮಹಡಿಯ ಫ್ಲ್ಯಾಟ್ಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು.
ಡಾ. ಬಿ ಡಿ ಮಾರ್ಗದಲ್ಲಿ ಈ ಫ್ಲ್ಯಾಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಸಮಯ ವ್ಯರ್ಥ ಮಾಡದಂತೆ ನಿಗದಿತ ಸಮಯದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
76 ಫ್ಲ್ಯಾಟ್ಗಳನ್ನು ನಿರ್ಮಿಸುವ ಸಲುವಾಗಿ 80 ವರ್ಷಗಳಷ್ಟು ಹಳೆಯದಾದ ಎಂಟು ಹಳೆಯ ಬಂಗಲೆಗಳನ್ನು ಪುನರಾಭಿವೃದ್ಧಿ ಮಾಡಲಾಗಿದೆ. ಅಂದಾಜು ವೆಚ್ಚಕ್ಕಿಂತ ಶೇಕಡಾ 14 ರಷ್ಟು ಕಡಿಮೆ ಮೊತ್ತದಲ್ಲಿ ಈ ಫ್ಲ್ಯಾಟ್ ನಿರ್ಮಾಣಗೊಂಡಿದೆ ಎಂಬುದು ವಿಶೇಷ.
ಫ್ಲ್ಯಾಟ್ಗಳನ್ನು ಪರಿಸರ ರಕ್ಷಣೆಯ ಹಲವು ಉಪಕ್ರಮಗಳಿಂದ ನಿರ್ಮಾಣ ಮಾಡಲಾಗಿದೆ. ಕಡಿಮೆ ವಿದ್ಯುತ್ ಬಳಕೆಗಾಗಿ ವಿಆರ್’ವಿ ವ್ಯವಸ್ಥೆ, ನೀರಿನ ಕಡಿಮೆ ಬಳಕೆಗಾಗಿ ಹಲವು ವ್ಯವಸ್ಥೆಗಳು, ಮಳೆ ನೀರು ಕೊಯ್ಲು ವ್ಯವಸ್ಥೆ, ಸೌರ ಸ್ಥಾಪರಗಳ ವ್ಯವಸ್ಥೆ ಇದರಲ್ಲಿ ಇದೆ ಎಂದು ಹೇಳಲಾಗಿದೆ.
ಬಹು ಮಹಡಿಯ ಫ್ಲ್ಯಾಟ್ಗಳ ಉದ್ಘಾಟನೆ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.