ನವದೆಹಲಿ: 2021-22ರ ವಾರ್ಷಿಕ ಬಜೆಟ್ಗಾಗಿ ಸಲಹೆ, ಸೂಚನೆಗಳನ್ನು ಹಣಕಾಸು ಸಚಿವಾಲಯವು ಜನರಿಂದ ಸ್ವೀಕರಿಸುತ್ತಿದೆ. ನವೆಂಬರ್ 15ರಿಂದಲೇ ಜನರು ಸಲಹೆ ಸೂಚನೆ ನೀಡಲು ವೇದಿಕೆ ತೆರೆಯಲಾಗಿದೆ.
ಹಲವು ವರ್ಷಗಳಿಂದ, ಹಣಕಾಸು ಸಚಿವಾಲಯವು ವಾರ್ಷಿಕ ಬಜೆಟ್ಗೂ ಮುಂಚಿತವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಸಂಘಗಳು, ವ್ಯಾಪಾರ ಸಂಸ್ಥೆಗಳು ಮತ್ತು ತಜ್ಞರೊಂದಿಗೆ ಪೂರ್ವ ಬಜೆಟ್ ಸಮಾಲೋಚನೆಗಳನ್ನು ನಡೆಸುತ್ತಾ ಬಂದಿದೆ. ಈ ಬಾರಿಯೂ ಅದನ್ನು ಮುಂದುವರೆಸಿದೆ.
ವಾರ್ಷಿಕ ಬಜೆಟ್ 2021-22ರ ಸಮಾಲೋಚನೆಗಳನ್ನು ಭಾರತದ ಜನರಿಗೆ ಹತ್ತಿರ ತರುವ ಮೂಲಕ ಹೆಚ್ಚು ಭಾಗವಹಿಸುವಂತೆ ಮತ್ತು ಪ್ರಜಾಪ್ರಭುತ್ವವಾಗಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು.
ಮೈಗೌವ್ ಪ್ಲಾಟ್ಫಾರ್ಮ್ನಲ್ಲಿ ಮೈಕ್ರೋ-ಸೈಟ್ – ಆನ್ಲೈನ್ ಪೋರ್ಟಲ್ ಅನ್ನು ಸರ್ಕಾರ ಪ್ರಾರಂಭಿಸಿದ್ದು, ಇದು ಬಜೆಟ್ನ ವಿಚಾರಗಳನ್ನು ನವೆಂಬರ್ 15 ರಿಂದಲೇ ಸ್ವೀಕರಿಸುತ್ತಿದೆ. ನವೆಂಬರ್ 30ರವರೆಗೆ ಸಲಹೆ ಸೂಚನೆಯನ್ನು ನೀಡಬಹುದಾಗಿದೆ.
ಇದು ಮೋದಿಯ 2.0 ಸರ್ಕಾರದ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಮೂರನೇ ಬಜೆಟ್ ಆಗಿದ್ದು, ಮುಂದಿನ ಫೆಬ್ರವರಿ 1 ರಂದು ಮಂಡನೆಯಾಗುವ ಸಾಧ್ಯತೆ ಇದೆ.
Finance Ministry seeks Ideas/Suggestions/Proposals for
Annual Budget 2021-22.Please visit➡️ https://t.co/qMDVQrJXZA
The last date for submissions is 30th November 2020.@nsitharamanoffc @Anurag_Office @PIB_India @mygovindia @DDNewslive @airnewsalerts
— Ministry of Finance (@FinMinIndia) November 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.