ನವದೆಹಲಿ: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದ ಅವಳಿ ನಗರಗಳೆಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ-ಧಾರವಾಡ ನಗರಗಳು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿವೆ.
ಕೇಂದ್ರದ ನಗರಾಭಿವೃದ್ದಿ ಇಲಾಖೆ ಸ್ಮಾರ್ಟ್ ಸಿಟಿ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರಾಜ್ಯಕ್ಕೆ ಹುಬ್ಬಳ್ಳಿ-ಧಾರವಾಡಗಳು ಪ್ರಥಮ ಸ್ಥಾನ ಗಳಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. 67.42 ಅಂಕಗಳನ್ನು ಹುಬ್ಬಳ್ಳಿ-ಧಾರವಾಡ ಗಳಿಸಿರುವುದಾಗಿಯೂ ಈ ಪಟ್ಟಿ ಮಾಹಿತಿ ನೀಡಿದೆ.
ಇನ್ನು ದೇಶಕ್ಕೆ ಸಂಬಂಧಿಸಿದಂತೆ 83.38 ಅಂಕಗಳನ್ನು ಪಡೆದಿರುವ ಅಹಮದಾಬಾದ್ ಮೊದಲ ಸ್ಥಾನವನ್ನು ಗಳಿಸಿರುವುದಾಗಿಯೂ ಕೇಂದ್ರ ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.
ಇನ್ನು ರಾಜ್ಯಕ್ಕೆ ಸಂಬಂಧಿಸಿದಂತೆ 14 ನೇ ಸ್ಥಾನದಲ್ಲಿ ದಾವಣಗೆರೆ, ತುಮಕೂರು 18, ಶಿವಮೊಗ್ಗ 25 , ಬೆಳಗಾವಿ 27 ನೇ ರ್ಯಾಂಕ್ ಮತ್ತು ಮಂಗಳೂರು 28 ನೇ ರ್ಯಾಂಕ್ಗೆ ತೃಪ್ತಿ ಪಟ್ಟುಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.