ಮೈಸೂರು: ಡಿ 10 ರಿಂದ ತೊಡಗಿದಂತೆ ಮೈಸೂರು-ಮಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ ಆರಂಭವಾಗಲಿದೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಕಾರ್ಯಾರಂಭವಾಗಿ 10 ವರ್ಷಗಳ ಬಳಿಕ ಇದೀಗ ಮೈಸೂರು-ಮಂಗಳೂರಿನ ನಡುವೆ ವಿಮಾನ ಹಾರಾಟ ನಡೆಯಲಿದೆ. ಡಿ 10 ರಿಂದ ಏರ್ ಇಂಡಿಯಾದ ಅಂಗಸಂಸ್ಥೆಯಾದ ಅಲೈನ್ಸ್ ಏರ್ ನ ವಿಮಾನಗಳು ಹಾರಾಟ ಆರಂಭಿಸಲಿವೆ.
ಇದರಿಂದಾಗಿ ಮಂಗಳೂರು-ಮೈಸೂರು ನಡುವಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಈ ವರೆಗೆ ಮುಂಬೈಗೆ ತೆರಳಬೇಕಿದ್ದರೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ನಂತರ ಮುಂಬೈ ಪ್ರಯಾಣ ಬೆಳೆಸಬೇಕಿತ್ತು. ಆದರೆ ಮೈಸೂರು-ಮಂಗಳೂರು ನಡುವಿನ ವಿಮಾನ ಸಂಚಾರ ಆರಂಭವಾದರೆ, ಮೈಸೂರಿನಿಂದಲೇ ಮುಂಬೈಗೆ ತೆರಳುವುದಕ್ಕೂ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಸದ್ಯ ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಗೆ ಭಾರತೀಯ ವಿಮಾನ ಯಾನ ಪ್ರಾಧಿಕಾರ ಅಕ್ಟೋಬರ್ 25 ರಿಂದಲೇ ವಿಮಾನ ಹಾರಾಟ ನಡೆಸಲು ಚಿಂತನೆ ನಡೆಸಿತ್ತು. ಆದರೆ ಈ ಯೋಜನೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ವಿಮಾನ ಯಾನ ಆರಂಭಿಸುವ ಬಗ್ಗೆ ಪ್ರಾಧಿಕಾರ ಅಧಿಕೃತ ಮಾಹಿತಿ ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.