ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯದ ಕಾರಣ ಭಾರತವು ತನ್ನ ನೌಕಾ ಸಾಮರ್ಥ್ಯವನ್ನು ಸುಧಾರಿಸುವತ್ತ ಗಮನಹರಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಟಾರ್ಪಿಡೊ ಪೂರೈಕೆಯೊಂದಿಗೆ ಭಾರತೀಯ ನೌಕಾಪಡೆಯ ಫೈಯರ್ಪವರ್ ಶಕ್ತಿ ಪ್ರಮುಖ ಉತ್ತೇಜನವನ್ನು ಪಡೆದುಕೊಂಡಿದೆ.
ನಿನ್ನೆ ನಡೆದ ಸಮಾರಂಭದಲ್ಲಿ, ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಭಾರೀ ತೂಕದ ಟಾರ್ಪಿಡೊ ವರುಣಾಸ್ತ್ರವನ್ನು ಭಾರತೀಯ ನೌಕಾಪಡೆಗೆ ಅದರ ತಯಾರಕ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಇಎಲ್) ಹಸ್ತಾಂತರಿಸಿದೆ.
ವಿಶಾಖಪಟ್ಟಣಂನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಒಂದು ಘಟಕವಾದ ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯವು ಈ ಟಾರ್ಪಿಡೊ ಅನ್ನು ವಿನ್ಯಾಸಗೊಳಿಸಿದೆ.
ವರುಣಾಸ್ತ್ರವು ಜಲಾಂತರ್ಗಾಮಿ ವಿರೋಧಿ ಟಾರ್ಪಿಡೊ ಮತ್ತು ವಿದ್ಯುತ್ ಚಾಲಿತವಾಗಿದೆ. ಇದು 40 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ, ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸಬಹುಲ್ಲದು ಮತ್ತು ಗರಿಷ್ಠ 400 ಮೀಟರ್ ಆಳಕ್ಕೆ ಧುಮುಕಬಲ್ಲದು. ಇದು 250 ಕೆಜಿ ತೂಕದ ಸಿಡಿತಲೆ ಸಾಗಿಸಬಲ್ಲದು.
ಟಾರ್ಪಿಡೊವನ್ನು ಮುಂದಿನ ದಿನಗಳಲ್ಲಿ ಸ್ನೇಹಪರ ರಾಷ್ಟ್ರಗಳಿಗೆ ಮಾರಾಟ ಮಾಡಲು ಭಾರತ ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.