ನವದೆಹಲಿ: ದೇಶದಲ್ಲಿ ನಿರಂತರ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಇಂಧೋರ್ ಹೈಕೋರ್ಟ್ ಸಮೀಪದ ತನ್ನ ಕಛೇರಿಯಲ್ಲಿ ಕುಳಿತು ಮಾಧ್ಯಮಗಳಲ್ಲಿ ನೋಡುತ್ತಿದ್ದ ವಕೀಲ ಕಮಲೇಶ್ ವಾಸ್ವಾನಿ ವೇದನೆ ಪಡುತ್ತಿದ್ದರು. 2012ರ ಡಿಸೆಂಬರ್ 16ರಂದು ನಡೆದಿದ್ದ ದೆಹಲಿ ಗ್ಯಾಂಗ್ ರೇಪ್ ಅವರ ಮನಸ್ಸನ್ನೇ ಕಲುಕಿತ್ತು.
ಮಹಿಳೆಯರ ವಿರುದ್ಧ ಈ ದೌರ್ಜನ್ಯವನ್ನು ತಡೆಗಟ್ಟಲು ತಾನು ಏನನ್ನಾದರೂ ಮಾಡಬೇಕು ಎಂಬ ತುಡಿತ ಅವರಲ್ಲಿ ಹೆಚ್ಚಾಯಿತು. ಹೀಗಾಗಿ ಇಂಟರ್ನೆಟ್ನಲ್ಲಿನ ಪೋರ್ನೋಗ್ರಫಿಗೂ ಲೈಂಗಿಕ ಅಪರಾಧಕ್ಕೂ ಸಂಬಂಧವಿದೆ ಎಂಬುದು ಅವರ ಗಮನಕ್ಕೆ ಬಂತು. ಹೀಗಾಗಿ ಅವರು ಪೋರ್ನೋಗ್ರಫಿ ತಡೆಯಲು ಕಾನೂನು ಸಮರಕ್ಕೆ ಮುಂದಾದರು.
2013ರಲ್ಲಿ ಕಮಲೇಶ್ ಸುಪ್ರೀಂಕೋರ್ಟ್ಗೆ ಪೋರ್ನ್ ವೆಬ್ಸೈಟ್ಗಳ ಮೇಲೆ ನಿಷೇಧ ಹೇರುವಂತೆ ಪಿಟಿಷನ್ ಹಾಕಿದರು.
ಭಾನುವಾರ ಪೋರ್ನ್ ವೆಬ್ಸೈಟ್ಗಳನ್ನು ನಿಷೇಧಿಸುವಂತೆ ಎಲ್ಲಾ ಇಂಟರ್ನೆಟ್ ಪ್ರೊವೈಡರ್ಗಳಿಗೆ ಸರ್ಕಾರ ಸೂಚಿಸಿದೆ. ಇದು ಕಮಲೇಶ್ ಅವರ ಸಂತೋಷಕ್ಕೆ ಕಾರಣವಾಗಿದೆ. ಸುಪ್ರೀಂ ಸೂಚನೆಯಂತೆ ಸರ್ಕಾರ ನಡೆದುಕೊಂಡಿರುವುದು, ತನ್ನ ಶ್ರಮಕ್ಕೆ ಫಲ ಸಿಕ್ಕಿರುವುದು ಅವರಿಗೆ ಸಮಾಧಾನ ತಂದಿದೆ.
ಪೋರ್ನ್ ವೆಬ್ಗಳು ಮಹಿಳೆಯರ ಘನತೆಗೆ ಧಕ್ಕೆ ತರುತ್ತಿವೆ, ಇದನ್ನು ನೋಡುವ ವ್ಯಕ್ತಿಗಳ ಮನಸ್ಥಿತಿ ಬದಲಾಗಿ ಲೈಂಗಿಕ ದೌರ್ಜನ್ಯದತ್ತ ಮುಖ ಮಾಡುತ್ತಾರೆ, ಮಹಿಳೆಯರನ್ನು ಕೆಟ್ಟದಾಗಿ ನೋಡುತ್ತಾರೆ, ಮಕ್ಕಳ ಪೋರ್ನ್ ಅಂತೂ ನಮ್ಮ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಕಮಲೇಶ್ ಅಭಿಪ್ರಾಯ.
ಅದೇನೆಯಿರಲಿ ಪೋರ್ನ್ಗಳನ್ನು ಸರ್ಕಾರ ಬ್ಯಾನ್ ಮಾಡಿದೆ, ಇದಕ್ಕೆ ದೇಶದೆಲ್ಲೆಡೆಯಿಂದ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಚಚೆಗಳುನಡೆಯುತ್ತಿವೆ. ಅದೇನೆಯಿರಲಿ ಅಶ್ಲೀಲತೆಯನ್ನೇ ಪಸರಿಸುತ್ತಿದ್ದ ಪೋರ್ನ್ ಕೊನೆಗೂ ನಿಷೇಧವಾಯಿತಲ್ಲ ಎಂಬುದೇ ಸಮಾಧಾನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.