ಅಂಬಾಲ: ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಇಂದು ಭಾರತ್ ಬಯೋಟೆಕ್ನ ಕೋವಿಡ್ -19 ಲಸಿಕೆ ‘ಕೋವ್ಯಾಕ್ಸಿನ್’ ಅನ್ನು ಅಂಬಾಲ ಆಸ್ಪತ್ರೆಯಲ್ಲಿ ಪ್ರಯೋಗಿಕವಾಗಿ ಹಾಕಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜ್ ಅವರು, “ಭಾರತೀಯ ಕಂಪನಿ ಕೊರೋನಾ ವೈರಸ್ಗೆ ಲಸಿಕೆ ಅಭಿವೃದ್ಧಿಪಡಿಸಿದೆ ಎಂಬುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಎರಡು ಯಶಸ್ವಿ ಪ್ರಯೋಗಗಳನ್ನು ನಡೆಸಲಾಗಿದೆ ಮತ್ತು ಮೂರನೇ ಪ್ರಯೋಗ ಇಂದು ಆರಂಭವಾಗಿದೆ. ಜನರಲ್ಲಿ ಭಯದ ಭಾವನೆಯನ್ನು ತೊಡೆದು ಹಾಕಿ ಲಸಿಕೆಯ ಪ್ರಯೋಗಕ್ಕೆ ಅವರು ಮುಂದೆ ಬರುವಂತೆ ಮಾಡಲು ನಾನೇ ಮೊದಲಿಗನಾಗಿ ಲಸಿಕೆಯನ್ನು ಹಾಕಿಸಿಕೊಂಡೆ. ಎಲ್ಲವು ಸುಗಮವಾಗಿ ನಡೆದರೆ, ಶೀಘ್ರದಲ್ಲಿ ಲಸಿಕೆ ಮಾರುಕಟ್ಟೆಗೆ ಬರಲಿದೆ” ಎಂದಿದ್ದಾರೆ.
ಮೂರನೇ ಹಂತದ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಅವರು ತಮ್ಮನ್ನು ಮೊದಲ ಸ್ವಯಂಸೇವಕನಾಗಿ ಕೆಲ ದಿನಗಳ ಹಿಂದೆ ಘೋಷಿಸಿದ್ದರು. ಅದರಂತೆ ಅವರು ಇಂದು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಆರೋಗ್ಯ ಸಚಿವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.