ನವದೆಹಲಿ: ಭಾರತೀಯ ರೈಲ್ವೆಯ ರೈಲ್ವೆ ಕೋಚ್ ಫ್ಯಾಕ್ಟರಿ (ಆರ್ಸಿಎಫ್) ಕಪುರ್ಥಲಾ ಬುಧವಾರ ಅರೆ-ಹೈಸ್ಪೀಡ್ ಡಬಲ್ ಡೆಕ್ಕರ್ ರೈಲು ಕೋಚ್ ಅನ್ನು ಪ್ರಾರಂಭಿಸಿದ್ದು, ಇದು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಸಂಚರಿಸಬಲ್ಲದು. ರೈಲ್ವೆ ಹೇಳಿರುವ ಮಾಹಿತಿಯ ಪ್ರಕಾರ, ಇತ್ತೀಚೆಗೆ ಪ್ರಾರಂಭಿಸಲಾದ ಈ ಡಬಲ್ ಡೆಕ್ಕರ್ ಕೋಚ್ 120 ಸೀಟುಗಳನ್ನು ಹೊಂದಿದೆ.
ಕೋಚ್ನ ಮೇಲಿನ ಡೆಕ್ನಲ್ಲಿ 50 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಬಹುದಾಗಿದ್ದು, ಕೆಳ ಡೆಕ್ನಲ್ಲಿ ಸುಮಾರು 48 ಪ್ರಯಾಣಿಕರು ಕುಳಿತುಕೊಳ್ಳಬಹುದು. ಹೊಸದಾಗಿ ಪ್ರಾರಂಭಿಸಲಾದ ಕೋಚ್ನ ಹೆಚ್ಚಿನ ವಿವರಗಳನ್ನು ಒದಗಿಸಿರುವ ರೈಲ್ವೆ, ಹಿಂಭಾಗದ ತುದಿಗಳಲ್ಲಿನ ಮಧ್ಯದ ಡೆಕ್ 1 ಬದಿಯಲ್ಲಿ 16 ಆಸನಗಳನ್ನು ಮತ್ತು ಇನ್ನೊಂದೆಡೆ 6 ಆಸನಗಳನ್ನು ಹೊಂದಿದೆ ಎಂದು ಹೇಳಿದೆ.
“ಅಕ್ಷರಶಃ ಇದು ಗಾಳಿಯಲ್ಲಿನ ಸವಾರಿ, ಕೋಚ್ ಸುಧಾರಿತ ಅತ್ಯಾಧುನಿಕ ಏರ್ ಸ್ಪ್ರಿಂಗ್ ಸಸ್ಪೆನ್ಶನ್ ವ್ಯವಸ್ಥೆಯನ್ನು ಹೊಂದಿದ್ದು, ಇದಕ್ಕೆ ಬೋಗಿಗಳ ಸುಧಾರಿತ FIAT ವಿನ್ಯಾಸವನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ, ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಬೆಂಕಿ ಮತ್ತು ಹೊಗೆ ಪತ್ತೆ ವ್ಯವಸ್ಥೆಯನ್ನು ಇದರಲ್ಲಿ ಸ್ಥಾಪಿಸಲಾಗಿದೆ” ಎಂದು ರೈಲ್ವೆ ತಿಳಿಸಿದೆ.
ಹೊಸ ತಲೆಮಾರಿನ ಡಬಲ್ ಡೆಕ್ಕರ್ ಎಸಿ ಚೇರ್ ಕಾರ್ ಕೋಚ್ನ ದೃಶ್ಯವನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಪೋಸ್ಟ್ ಮಾಡಿದ್ದಾರೆ. ಸಚಿವರು ಪೋಸ್ಟ್ ಮಾಡಿದ ವಿಡಿಯೋ ಈ ಹೊಸ ರೈಲು ಕೋಚ್ನ ಒಳಾಂಗಣದ ನೋಟವನ್ನು ತೋರಿಸುತ್ತದೆ.
Rail Coach Factory, Kapurthala is leading from the front in indigenous development & innovation.
Take a glimpse of new generation Double Decker AC Chair Car Coach, capable of running at 160 kmph. RDSO will conduct safety trials before Railways inducts this coach into operations. pic.twitter.com/M613A7d0Kc
— Piyush Goyal (@PiyushGoyal) November 18, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.