ನವದೆಹಲಿ: 2021-22ರ ವಾರ್ಷಿಕ ಬಜೆಟ್ಗಾಗಿ ಸಲಹೆ, ಸೂಚನೆ ನೀಡುವಂತೆ ಮತ್ತು ವಿಚಾರಗಳನ್ನು ಹಂಚಿಕೊಳ್ಳುವಂತೆ ಹಣಕಾಸು ಸಚಿವಾಲಯವು ಮನವಿ ಮಾಡಿದೆ. ಹಲವು ವರ್ಷಗಳಿಂದ, ಹಣಕಾಸು ಸಚಿವಾಲಯವು ವಾರ್ಷಿಕ ಬಜೆಟ್ಗಾಗಿ ಕೈಗಾರಿಕೆ ಮತ್ತು ವಾಣಿಜ್ಯ ಸಂಘಗಳು, ವ್ಯಾಪಾರ ಸಂಸ್ಥೆಗಳು ಮತ್ತು ತಜ್ಞರೊಂದಿಗೆ ಪೂರ್ವ ಬಜೆಟ್ ಸಮಾಲೋಚನೆಗಳನ್ನು ನಡೆಸುತ್ತಾ ಬಂದಿದೆ.
ಸಾಂಕ್ರಾಮಿಕ ಪರಿಸ್ಥಿತಿಯ ಕಾರಣದಿಂದಾಗಿ, ಬಜೆಟ್ ಪೂರ್ವ ಸಮಾಲೋಚನೆಗಳನ್ನು ಬೇರೆ ಸ್ವರೂಪದಲ್ಲಿ ನಡೆಸಲು ಸಚಿವಾಲಯವು ವಿವಿಧ ಭಾಗಗಳಿಂದ ಸಲಹೆಗಳನ್ನು ಸ್ವೀಕರಿಸಿದೆ. ವಿವಿಧ ಸಂಸ್ಥೆಗಳು ಮತ್ತು ತಜ್ಞರಿಂದ ಸಲಹೆಗಳನ್ನು ಸ್ವೀಕರಿಸಲು ಮೀಸಲಾದ ಇಮೇಲ್ ರಚಿಸಲು ನಿರ್ಧರಿಸಲಾಗಿದೆ.
ವಾರ್ಷಿಕ ಬಜೆಟ್ 2021-22ರ ಸಮಾಲೋಚನೆಗಳನ್ನು ಭಾರತದ ಜನರಿಗೆ ಹತ್ತಿರ ತರುವ ಮೂಲಕ ಹೆಚ್ಚು ಭಾಗವಹಿಸುವಂತೆ ಮತ್ತು ಪ್ರಜಾಪ್ರಭುತ್ವವಾಗಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮೈಗೌವ್ ಪ್ಲಾಟ್ಫಾರ್ಮ್ನಲ್ಲಿ ಮೈಕ್ರೋ-ಸೈಟ್ – ಆನ್ಲೈನ್ ಪೋರ್ಟಲ್ ಅನ್ನು ಸರ್ಕಾರ ಪ್ರಾರಂಭಿಸಿದೆ, ಇದು ಬಜೆಟ್ನ ವಿಚಾರಗಳನ್ನು ಸ್ವೀಕರಿಸಲು ಈ ತಿಂಗಳ 15 ರಂದು ಲೈವ್ಗೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.