ಜೈಸಲ್ಮೇರ್: ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷದಂತೆ ಈ ವರ್ಷ ಕೂಡ ದೇಶದ ರಕ್ಷಣೆ ಮಾಡುವ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಯೋಜನೆಗೊಂಡಿರುವ ಯೋಧರೊಂದಿಗೆ ಅವರು ಇಂದು ದೀಪಾವಳಿ ಆಚರಣೆ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ನಾನು ನಿಮ್ಮೊಂದಿಗೆ ಇದ್ದಾಗ ಮಾತ್ರ ನನ್ನ ದೀಪಾವಳಿ ಪರಿಪೂರ್ಣಗೊಳ್ಳುತ್ತದೆ” ಎಂದಿದ್ದಾರೆ.
“ಪ್ರತಿ ಭಾರತೀಯನೂ ತನ್ನ ಸೈನಿಕರ ಬಗ್ಗೆ ಹೆಮ್ಮೆ ಹೊಂದಿದ್ದಾನೆ. ನಮ್ಮ ಗಡಿಯನ್ನು ರಕ್ಷಣೆ ಮಾಡುವುದರಿಂದ ಜಗತ್ತಿನ ಯಾವ ಶಕ್ತಿ ಕೂಡ ನಮ್ಮನ್ನು ತಡೆಯಲಾರದು” ಎಂದಿದ್ದಾರೆ.
“ಹಿಮಾಲಯದ ತುತ್ತತುದಿಯೇ ಇರಲಿ, ಮರುಭೂಮಿ ಇರಲಿ, ದಟ್ಟಾರಣ್ಯವೇ ಇರಲಿ, ಸಮುದ್ರದ ಆಳವೇ ಇರಲಿ. ನಿಮ್ಮ ಶೌರ್ಯ ಪ್ರತಿ ಸವಾಲನ್ನು ಹಿಮ್ಮೆಟ್ಟಿಸಿ ನಿಂತಿದೆ” ಇಂದು ಮೋದಿ ಯೋಧರ ಸಾಹಸ ಮತ್ತು ಧೈರ್ಯವನ್ನು ಕೊಂಡಾಡಿದರು.
ಈ ದೀಪಾವಳಿ ಸಂಭ್ರಮಾಚರಣೆಯಲ್ಲಿ ಬಿಎಸ್ಎಫ್ ಮಹಾನಿರ್ದೇಶಕ ರಾಕೇಶ್ ಅಸ್ತಾನಾ, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಅವರು ಪ್ರಧಾನಿ ಜೊತೆಗೂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.