ನವದೆಹಲಿ: ಪಾಕಿಸ್ಥಾನ ಉಗ್ರಗಾಮಿಗಳ ತವರೂರು ಎಂಬುದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿನ ದಿನಗಳಲ್ಲಿ ಪಾಕ್ ತನ್ನ ಒಂದೊಂದೇ ರಹಸ್ಯಗಳನ್ನು ಬಯಲು ಮಾಡುವಂತಹ ಸತ್ಯಗಳನ್ನು ಹೊರಹಾಕುತ್ತಲೇ ಬಂದಿದೆ.
ಇದೀಗ ಪಾಕಿಸ್ಥಾನದ ತನಿಖಾ ಸಂಸ್ಥೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮುಂಬೈ ದಾಳಿಗೆ ಸಂಬಂಧಿಸಿದಂತೆಯೂ ಸತ್ಯವೊಂದನ್ನು ತಿಳಿಸಿದೆ. ಪಾಕಿಸ್ಥಾನದ 11 ಮಂದಿ ಉಗ್ರರು ಮುಂಬೈನ ತಾಜ್ ಹೊಟೇಲ್ನಲ್ಲಿ ನಡೆದ ದಾಳಿಯಲ್ಲಿ ಪಾತ್ರ ವಹಿಸಿದ್ದಾರೆ ಎನ್ನುವ ಮೂಲಕ ಮತ್ತೊಮ್ಮೆ ಜಗತ್ತಿನ ಎದುರು ಬೆತ್ತಲಾಗಿದೆ. ಈ ಹಿಂದೆ ಪುಲ್ವಾಮ ದಾಳಿ ತಾನೇ ನಡೆಸಿದ್ದು ಎಂದು ಒಪ್ಪಿಕೊಳ್ಳುವ ಮೂಲಕ ಉಗ್ರವಾದಿಗಳಿಗೆ, ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವುದನ್ನು ಪಾಕಿಸ್ಥಾನ ಒಪ್ಪಿಕೊಂಡಿತ್ತು.
ಪಾಕ್ನ ತನಿಖಾ ಸಂಸ್ಥೆ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಎಂದು ತಿಳಿಸಿದೆ. ಈತನನ್ನು ಯುನೈಟೆಡ್ ನೇಷನ್ಸ್ ಅಂತರರಾಷ್ಟ್ರೀಯ ಉಗ್ರಗಾಮಿ ಪಟ್ಟಿಯಲ್ಲಿ ಸೇರಿಸಿದೆ. ಹಾಗೆಯೇ ಪುಲ್ವಾಮ ದಾಳಿಯ ಬಳಿಕ ಜೈಶ್ ಎ ಮೊಹಮ್ಮದ್ ಸಂಘಟನೆಯ ನಾಯಕ ಮಸೂದ್ ಅಝರ್ನನ್ನು ಅಂತರಾಷ್ಟ್ರೀಯ ಉಗ್ರ ಎಂದು ಘೋಷಿಸಲಾಗಿದೆ. ಇನ್ನು ಬಲೂಚಿಸ್ಥಾನದಲ್ಲಿ ಪಾಕಿಸ್ಥಾನದ 161 ಮೋಸ್ಟ್ ವಾಂಟೆಡ್ ಉಗ್ರಗಾಮಿಗಳು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಈ ಪಟ್ಟಿಯಲ್ಲಿ ತಿಳಿಸಿದೆ. ಖೈಬರ್, ಸಿಂಧ್, ಪಂಜಾಬ್, ಇಸ್ಲಮಾಬಾದ್, ಪಿಒಕೆಗಳಲ್ಲಿಯೂ ಪಾಕಿಸ್ಥಾನದ ಉಗ್ರರು ಸಾಕಷ್ಟು ಸಂಖ್ಯೆಯಲ್ಲಿ ಇರುವುದಾಗಿ ಪಾಕಿಸ್ಥಾನದ ತನಿಖಾ ತಂಡ ತನ್ನ ಪಟ್ಟಿಯಲ್ಲಿ ತಿಳಿಸಿದೆ.
ಒಟ್ಟಾರೆಯಾಗಿ ಪಾಕಿಸ್ಥಾನ ಉಗ್ರರನ್ನು ಪೋಷಣೆ ಮಾಡುತ್ತಿರುವುದಕ್ಕೆ ಇದೀಗ ಪಾಕಿಸ್ಥಾನವೇ ಸಾಕ್ಷಿ ಹೇಳುತ್ತಿದ್ದು ಆ ಮೂಲಕ ಜಗತ್ತಿನ ಮುಂದೆ ತಾನೇನು, ತನ್ನ ನಿಜ ಸ್ವರೂಪವೇನು ಎಂಬುದನ್ನು ತೆರೆದಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.