ನವದೆಹಲಿ: ಭಾರತವು ಬಾಂಗ್ಲಾದೇಶ ಸೇನೆಗೆ 20 ಕುದುರೆಗಳು, 10 ನೆಲೆಬಾಂಬ್ ಪತ್ತೆ ಹಚ್ಚುವ ಶ್ವಾನಗಳನ್ನು ಉಡುಗೊರೆಯಾಗಿ ನೀಡಿದೆ.
ಮಂಗಳವಾರ ಬೆನಾಪೋಲ್-ಪೆಟ್ರಾಪೋಲ್ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ)ನಲ್ಲಿ ನಡೆದ ಸಮಾರಂಭದಲ್ಲಿ ಇವುಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎರಡೂ ಕಡೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಕುದುರೆಗಳು ಮತ್ತು ಶ್ವಾನಗಳಿಗೆ ಭಾರತೀಯ ಸೈನ್ಯದ ರಿಮೌಂಟ್ & ವೆಟರ್ನಿಟಿ ಕಾರ್ಪ್ಸ್ ತರಬೇತಿ ನೀಡಿದೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಸಂಪೂರ್ಣ ತರಬೇತಿ ಪಡೆದ ಮಿಲಿಟರಿ ಕುದುರೆಗಳು ಮತ್ತು ನೆಲಬಾಂಬ್ ಪತ್ತೆ ಮಾಡುವ ನಾಯಿಗಳನ್ನು ಬಾಂಗ್ಲಾದೇಶಕ್ಕೆ ಉಡುಗೊರೆಯಾಗಿ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ವಿಶೇಷ ನಾಯಿಗಳು ಮತ್ತು ಕುದುರೆಗಳಿಗೆ ತರಬೇತಿ ನೀಡಲು ಮತ್ತು ನಿರ್ವಹಿಸಲು ಭಾರತೀಯ ಸೇನೆಯು ಬಾಂಗ್ಲಾದೇಶ ಸೇನಾ ಸಿಬ್ಬಂದಿಗೆ ತರಬೇತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.