ನವದೆಹಲಿ: ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಡಿಎ) ಬಿಹಾರದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಇದೀಗ ಸರ್ಕಾರ ರಚನೆಯತ್ತ ಅದು ಚಿತ್ತ ಹರಿಸಿದೆ.
243 ಸದಸ್ಯರ ಬಿಹಾರ ವಿಧಾನ ಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿದೆ. ಎನ್ಡಿಎಗೆ 125 ಸ್ಥಾನಗಳು, ಪ್ರತಿಪಕ್ಷಗಳ ಮಹಾ ಮೈತ್ರಿಗೆ 110 ಸ್ಥಾನಗಳು ದೊರೆತಿವೆ. ಇತರರಿಗೆ 8 ಸ್ಥಾನಗಳು ಸಿಕ್ಕಿವೆ.
ಬಿಜೆಪಿ 74 ಸ್ಥಾನಗಳನ್ನು ಪಡೆದರೆ, ಜೆಡಿಯು 43 ಸ್ಥಾನಗಳನ್ನು ಗೆದ್ದಿದೆ. ಹಿಂದೂಸ್ತಾನಿ ಅವಾಮಿ ಮೋರ್ಚಾ (ಎಚ್ಎಎಂ) ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ತಲಾ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ.
ಮತ್ತೊಂದೆಡೆ, ಆರ್ಜೆಡಿ 75 ಮತ್ತು ಕಾಂಗ್ರೆಸ್ 19 ಸ್ಥಾನ ಪಡೆದುಕೊಂಡಿವೆ. ಸಿಪಿಐ ಮತ್ತು ಸಿಪಿಎಂ ತಲಾ 2 ಸ್ಥಾನಗಳನ್ನು ಗೆದ್ದಿವೆ. ಸಿಪಿಐ (ಎಂಎಲ್) 12 ಸ್ಥಾನಗಳನ್ನು ಗೆದ್ದಿದೆ.
ಅಸದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂಗೆ 5 ಸ್ಥಾನಗಳು ಸಿಕ್ಕಿವೆ. ಎಲ್ಜೆಪಿ, ಬಿಎಸ್ಪಿ ಮತ್ತು ಇಂಡಿಪೆಂಡೆಂಟ್ಗೆ ತಲಾ ಒಂದು ಸ್ಥಾನ ಸಿಕ್ಕಿದೆ.
ಎನ್ಡಿಎಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, 2015 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಆರ್ಜೆಡಿ, ಕಾಂಗ್ರೆಸ್ ಮತ್ತು ಜೆಡಿಯು ಸ್ಥಾನಗಳು ಈ ಬಾರಿ ಕಡಿಮೆಯಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.