ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸುಮಾರು 46 ಸಾವಿರ ಕೊರೋನಾ ಪ್ರಕರಣಗಳು ದಾಖಲಾಗಿವೆ. ಭಾರತದ ಒಟ್ಟು ಪ್ರಕರಣಗಳು ಇಂದು 85,53,657 ಕ್ಕೆ ಏರಿದೆ. ವೈರಸ್ನಿಂದ ಸಾವನ್ನಪ್ಪಿದವರ ಸಂಖ್ಯೆ 1,26,611ಕ್ಕೆ ತಲುಪಿದ್ದು, 490 ಹೊಸ ಸಾವುನೋವುಗಳು ದಾಖಲಾಗಿವೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ 11 ನೇ ದಿನ 6 ಲಕ್ಷಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,992 ರಷ್ಟು ಪ್ರಕರಣಗಳು ದೇಶದಲ್ಲಿ ಕಡಿಮೆಯಾದ ನಂತರ ಒಟ್ಟು ಸಕ್ರಿಯ ಪ್ರಕರಣಗಳು 5,09,673 ಆಗಿದೆ. ಗುಣಪಡಿಸಿದ ಒಟ್ಟು ಪ್ರಕರಣಗಳು 79,17,373 ಆಗಿದ್ದರೆ, 48,405 ಪ್ರಕರಣಗಳು ಹೊಸದಾಗಿ ಡಿಸ್ಚಾರ್ಜ್ ಕಂಡಿವೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇಕಡಾ 92.56 ಆಗಿದೆ.
ಕೋವಿಡ್-19ಗಾಗಿ ನಿನ್ನೆ ಒಟ್ಟು 8 ಲಕ್ಷ 35 ಸಾವಿರ 401 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.