ನವದೆಹಲಿ: ಲಡಾಖ್ ಕೇಂದ್ರಾಡಳಿತ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನ ನೀಡಲು ಅಲ್ಲಿನ ಆಡಳಿತವು ಕಾರ್ಗಿಲ್ ಜಿಲ್ಲೆಯಲ್ಲಿ ಸ್ನೋ ಸ್ಕಿ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪನೆ ಮಾಡಲಿದೆ. ಗುಲ್ಮಾರ್ಗ್ನ ಇನ್ಸ್ಟಿಟ್ಯೂಟ್ ಆಫ್ ಸ್ಕೀಯಿಂಗ್ ಮತ್ತು ಮೌಂಟೇನಿಯರಿಂಗ್ ( ಐಐಎಸ್ಎಂ) ಕೂಡ ಅಲ್ಲಿ ತಲೆ ಎತ್ತಲಿದೆ.
ಚಳಿಗಾಲದ ಪ್ರವಾಸೋದ್ಯಮವನ್ನು ಹೆಚ್ಚಿಸಲು ಇವುಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕಾಗಿ, ಕಾರ್ಗಿಲ್ ಪಟ್ಟಣದ ಸಮೀಪವಿರುವ ನಕ್ತುಲ್ ಪ್ರದೇಶದಲ್ಲಿ, ಶಂಕೂ ಮತ್ತು ಪಣಿಖರ್ ಪ್ರದೇಶಗಳಲ್ಲದೆ ಡ್ರಾಸ್ನ ಲಾಮೋಚನ್ ಮತ್ತು ಗೋಶನ್ ಪ್ರದೇಶದಲ್ಲಿ ಸ್ನೋ ಸ್ಕೀ ಸ್ಲೋಪ್ಗಳನ್ನು ನಿರ್ಮಿಸಲು ಆಡಳಿತ ನಿರ್ಧರಿಸಿದೆ.
ಈ ವರ್ಷ ಜಿಲ್ಲೆಯಲ್ಲಿ ಕನಿಷ್ಠ 100 ಬಾಲಕ ಮತ್ತು ಬಾಲಕಿಯರಿಗಾಗಿ ಸ್ನೋ ಸ್ಕೀ ಶಿಬಿರಗಳನ್ನು ಆಯೋಜಿಸಲು ಆಡಳಿತವು ನಿರ್ಧರಿಸಿದೆ, ಇದಕ್ಕಾಗಿ ಕೋಚಿಂಗ್ ಶಿಬಿರಗಳು ಮತ್ತು ಕಾರ್ಯಾಗಾರಗಳಿಗೆ ಬೇಕಾದ ಉಪಕರಣಗಳನ್ನು ಸಂಗ್ರಹಿಸಲಾಗುತ್ತಿದೆ.
ಇದಲ್ಲದೆ, ಈ ಚಳಿಗಾಲದ ಅವಧಿಯಲ್ಲಿಯೇ ಡ್ರಾಸ್ ಐಸ್ ಹಾಕಿ ರಿಂಕ್ನಲ್ಲಿ ರಾಷ್ಟ್ರಮಟ್ಟದ ಐಸ್ ಹಾಕಿ ಚಾಂಪಿಯನ್ಶಿಪ್ ಆಯೋಜಿಸಲು ಆಡಳಿತವು ನಿರ್ಧರಿಸಿದೆ. ಚಾಂಪಿಯನ್ಶಿಪ್ ಅನ್ನು ಐಐಎಸ್ಎಂ ಆಯೋಜಿಸಲಿದೆ.
ರಾಷ್ಟ್ರದಾದ್ಯಂತ ಮತ್ತು ವಿದೇಶಗಳಿಂದ ಗರಿಷ್ಠ ಸಂಖ್ಯೆಯ ಸಾಹಸ ಕ್ರೀಡಾ ಪ್ರಿಯರನ್ನು ಆಕರ್ಷಿಸಲು ಜಿಲ್ಲೆಯಲ್ಲಿ ಹೈಕಿಂಗ್, ರಾಕ್ ಕ್ಲೈಂಬಿಂಗ್, ಪರ್ವತಾರೋಹಣ ಮತ್ತು ಚಾರಣದಂತಹ ಇತರ ಸಾಹಸ ಕ್ರೀಡೆಗಳನ್ನು ಸಹ ಅನ್ವೇಷಿಸಲು ಆಡಳಿತವು ನಿರ್ಧರಿಸಿದೆ. ಇದು ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.