ನವದೆಹಲಿ: ಮಾಜಿ ಸೈನಿಕರುಗಳು ಬಹು ವರ್ಷಗಳ ಬೇಡಿಕೆಯಾಗಿದ್ದ ‘ಒನ್ ರ್ಯಾಂಕ್ ಒನ್ ಪೆನ್ಶನ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದು ಇಂದಿಗೆ 5 ವರ್ಷ ಪೂರೈಸಿದೆ. ಮಾಜಿ ಸೈನಿಕರ ಕಲ್ಯಾಣದ ದೃಷ್ಟಿಯಿಂದ ಇದು ಮಹತ್ವಪೂರ್ಣ ಯೋಜನೆಯಾಗಿದೆ.
ನವೆಂಬರ್ 7, 2015 ರಂದು, ಸರ್ಕಾರವು ಒಆರ್ಒಪಿ ಯೋಜನೆಯನ್ನು ಜಾರಿಗೊಳಿಸುವ ಘೋಷಣೆ ಮಾಡಿತ್ತು ಮತ್ತು ಜುಲೈ 1, 2014 ರಿಂದ ಅನ್ವಯವಾಗುವಂತೆ ಇದು ಜಾರಿಗೆ ಬಂದಿತು. ಈ ಯೋಜನೆಯಡಿ ಕಳೆದ ಐದು ವರ್ಷಗಳಲ್ಲಿ ಕೇಂದ್ರ 42,700 ಕೋಟಿ ರೂ.ಗಳನ್ನು 20.6 ಲಕ್ಷ ನಿವೃತ್ತ ರಕ್ಷಣಾ ಸಿಬ್ಬಂದಿಗೆ ವಿತರಿಸಿದೆ.
ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆಗೆ ಇಂದು ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, “ಈ ದಿನ, ಐದು ವರ್ಷಗಳ ಹಿಂದೆ, ನಮ್ಮ ರಾಷ್ಟ್ರವನ್ನು ರಕ್ಷಿಸುತ್ತಿರುವ ನಮ್ಮ ಮಹಾನ್ ಸೈನಿಕರ ಕಲ್ಯಾಣವನ್ನು ಖಾತ್ರಿಪಡಿಸಿಕೊಳ್ಳಲು ಭಾರತವು ಒಂದು ಐತಿಹಾಸಿಕ ಹೆಜ್ಜೆಯನ್ನು ತೆಗೆದುಕೊಂಡಿತು. # 5YearsOfOROP ಒಂದು ಮಹತ್ವದ ಸಂದರ್ಭ. ಭಾರತವು ದಶಕಗಳ ಕಾಲ OROP ಗಾಗಿ ಕಾಯುತ್ತಿತ್ತು” ಎಂದಿದ್ದಾರೆ.
ಅಮೋಘ ಸೇವೆ ನೀಡಿರುವ ಮಾಜಿ ಸೈನಿಕರಿಗೆ ನನ್ನ ಸೆಲ್ಯೂಟ್ ಎಂದು ಮೋದಿ ಹೇಳಿದ್ದಾರೆ.
Today, five years ago, India took a historic step towards ensuring the well-being of our great soldiers, who courageously protect our nation. #5YearsOfOROP is a momentous occasion. India waited for OROP for decades.
I salute our veterans for their remarkable service! pic.twitter.com/VmZUsJCAJP
— Narendra Modi (@narendramodi) November 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.