ನವದೆಹಲಿ: ಅಸ್ಸಾಂ ತನ್ನ ಏಳನೇ ವಿಮಾನ ನಿಲ್ದಾಣ ಮತ್ತು ಈಶಾನ್ಯವು 14 ನೇ ವಿಮಾನನಿಲ್ದಾಣವನ್ನು ಶೀಘ್ರದಲ್ಲೇ ಪಡೆಯಲಿದೆ. ಮರು-ಅಭಿವೃದ್ಧಿಪಡಿಸಿದ ರುಪ್ಸಿ ವಿಮಾನ ನಿಲ್ದಾಣದ ವಾಣಿಜ್ಯ ಕಾರ್ಯಾಚರಣೆಗಳು ಜನವರಿಯಿಂದ ಪ್ರಾರಂಭವಾಗಲಿದೆ.
ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ (ಉಡೆ ದೇಶ್ ಕಾ ಆಮ್ ನಾಗರಿಕ್) ಅಡಿಯಲ್ಲಿ ರುಪ್ಸಿ ವಿಮಾನ ನಿಲ್ದಾಣವು ಕಾರ್ಯಾಚರಣೆ ಆರಂಭಿಸಲು ಸಿದ್ಧವಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿನ (ಪಶ್ಚಿಮ ಬಂಗಾಳದ ಗಡಿಯಲ್ಲಿ) ವಿಮಾನ ನಿಲ್ದಾಣವನ್ನು 69 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪುನಃ ಅಭಿವೃದ್ಧಿಪಡಿಸಲಾಗಿದೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ವಾಣಿಜ್ಯ ಕಾರ್ಯಾಚರಣೆಗೆ ಪರವಾನಗಿಯನ್ನು ಸಹ ಪಡೆದುಕೊಳ್ಳಲಾಗಿದೆ.
337 ಎಕರೆ ಭೂಮಿಯಲ್ಲಿ ವ್ಯಾಪಿಸಿರುವ ಈ ವಿಮಾನ ನಿಲ್ದಾಣವು 3,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಟರ್ಮಿನಲ್ ಕಟ್ಟಡವನ್ನು ಹೊಂದಿದೆ. ಹೊಸದಾಗಿ ನಿರ್ಮಿಸಲಾದ ರನ್ವೇ ಎಟಿಆರ್ -72 ಮಾದರಿಯ ವಿಮಾನಗಳಿಗೆ ಸೂಕ್ತವಾಗಿದೆ.
ಎಎಐ ಬಿಡುಗಡೆಯ ಪ್ರಕಾರ, ವಿಮಾನ ನಿಲ್ದಾಣವು ಮಳೆನೀರು ಕೊಯ್ಲು ವ್ಯವಸ್ಥೆ, ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮತ್ತು ತೋಟಗಾರಿಕೆ ಕಾರ್ಯಗಳಂತಹ ಸುಸ್ಥಿರ ವೈಶಿಷ್ಟ್ಯಗಳೊಂದಿಗೆ ಸಮೃದ್ಧ ಪ್ರಾಣಿ ಮತ್ತು ಸಸ್ಯವರ್ಗವನ್ನು ಹೊಂದಿರುವ ಬೇಲಿಯಿಂದ ಸುತ್ತುವರಿದ ಕಾಡಿನ ಬಳಿ ಇದೆ ಎಂಬುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.