ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಜಮ್ಮು ಪ್ರದೇಶದ ಐದು ಜಿಲ್ಲೆಗಳ ನಿಯಂತ್ರಣ ರೇಖೆ (ಎಲ್ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ 7,777 ಬಂಕರ್ಗಳ ನಿರ್ಮಾಣವನ್ನು ಪೂರ್ಣಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ಪೂರ್ಣಗೊಂಡ 7,777 ಬಂಕರ್ಗಳಲ್ಲಿ 6,839 ವೈಯಕ್ತಿಕ ಬಂಕರ್ಗಳು ಮತ್ತು 938 ಸಮುದಾಯ ಬಂಕರ್ಗಳು ಆಗಿವೆ. ಒಟ್ಟಾರೆಯಾಗಿ, ಸಾಂಬಾದಲ್ಲಿ 1,569 ಬಂಕರ್ಗಳು, ಜಮ್ಮುವಿನಲ್ಲಿ 1,161, ಕಥುವಾದಲ್ಲಿ 1,519, ರಾಜೌರಿಯಲ್ಲಿ 2,603 ಮತ್ತು ಪೂಂಚ್ನಲ್ಲಿ 925 ಬಂಕರ್ಗಳು ಪೂರ್ಣಗೊಂಡಿವೆ.
ಇವುಗಳ ಹೊರತಾಗಿ, ಇನ್ನೂ 334 ಬಂಕರ್ಗಳ ಕೆಲಸ ನಡೆಯುತ್ತಿದೆ ಮತ್ತು ಪ್ರಸ್ತುತ ನಿರ್ಮಾಣದ ವಿವಿಧ ಹಂತಗಳಲ್ಲಿದೆ.
ಎಲ್ಒಸಿ ಮತ್ತು ಅಂತಾರಾಷ್ಟ್ರೀಯ ಗಡಿ ಉದ್ದಕ್ಕೂ ಪಾಕಿಸ್ಥಾನಿ ಶೆಲ್ ದಾಳಿ ಎದುರಿಸುತ್ತಿರುವ ಗಡಿ ಪ್ರದೇಶಗಳಿಗೆ 14,460 ವೈಯಕ್ತಿಕ ಮತ್ತು ಸಮುದಾಯ ಬಂಕರ್ಗಳನ್ನು ನಿರ್ಮಿಸಲು ಕೇಂದ್ರವು ಡಿಸೆಂಬರ್ 2017 ರಲ್ಲಿ ಅನುಮತಿ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.