ನವದೆಹಲಿ: ಒಂದು ಹೊಸ ಅಧ್ಯಯನದ ಪ್ರಕಾರ ರಾಷ್ಟ್ರವ್ಯಾಪಿ ಸುಮಾರು 400 ಕೋಟಿಗೂ ಅಧಿಕ ನಕಲಿ ನೋಟುಗಳು ಚಲಾವಣೆಯಲ್ಲಿರುವ ಬಗ್ಗೆ ಶಂಕಿಸಲಾಗಿದೆ. ವರ್ಷಂಪ್ರತಿ 70 ಕೋಟಿ ರೂಪಾಯಿಗಳು ಹರಿದು ಬರುತ್ತಿದೆ ಎಂದು ಗುಪ್ತಚರ ಇಲಾಖೆ ಅಂದಾಜಿಸಿದೆ. ಇದು ಭಾರತದ ಆರ್ಥಿಕ ಭದ್ರತೆಯನ್ನು ಕುಗ್ಗಿಸುತ್ತಲಿದೆ ಎಂದು ಹೇಳಲಾಗಿದೆ.
ಭಾರತೀಯ ತನಿಖಾ ಸಂಸ್ಥೆಯು ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ (ಐಎಸ್ಐ)ಗೆ ಇದರ ಸಂಶೋಧನೆ ನಡೆಸಲು ಕೋರಿದೆ. ಗುಪ್ತಚರ ಇಲಾಖೆ ಅಂದಾಜಿನ ಪ್ರಕಾರ ವರ್ಷಕ್ಕೆ 2,500 ಕೋಟಿ ಒಳಹರಿವು ಸಂಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ.
ನಕಲಿ ನೋಟುಗಳ ಚಲಾವಣೆಯ ಸಂದರ್ಭ ಬಳಸುವ ಶಾಯಿ, ಕಾಗದ, ಇತರ ವೈಶಿಷ್ಠ್ಯಗಳು ಸ್ವತಂತ್ರ ರಾಷ್ಟ್ರಗಳಲ್ಲಿ ಲಭ್ಯವಿರುತ್ತದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ಈ ನೋಟುಗಳನ್ನು ವಶಪಡಿಸಿ ಪರಿಶೀಲನೆಗೆ ಕಳುಹಿಸಿದಾಗ ಈ ನಕಲಿ ನೋಟುಗಳಿಗೆ ಬಳಸಲಾದ ಶಾಯಿ, ಕಾಗದ ಪಾಕಿಸ್ಥಾನಕ್ಕೆ ಸಂಬಂಧಿಸಿವೆ ಎಂದು ತಿಳಿದು ಬಂದಿದೆ.
ಕಳೆದ ಡಿಸೆಂಬರ್ನಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಸುಮಾರು 5000ದಿಂದ 10,000 ಕೋಟಿ ನಕಲಿ ನೋಟುಗಳ ಹರಿವು ಆಗಿದೆ ಎಂದು ಆಂತರಿಕ ಸರ್ಕಾರ ತಿಳಿಸಿದೆ. ಈ ನೋಟುಗಳ ಒಳಹರಿವಿನಲ್ಲಿ ಪಾಕಿಸ್ಥಾನದ ಕೈವಾಡವಿದೆ ಎನ್ನುವುದಕ್ಕೆ ಎಲ್ಲಾ ಸಾಕ್ಷಿಗಳು ಇವೆ. ನಕಲಿ ನೋಟುಗಳ ಚಲಾವಣೆಯ ನಿರ್ದಿಷ್ಟ ಮಾಹಿತಿ ಅಗತ್ಯವೆನಿಸಿದೆ. ಆದ್ದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು ಐಎಸ್ಐಗೆ ಇದರ ಕುರಿತು ತನಿಖೆ ನಡೆಸಲು ಕೋರಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.