ನವದೆಹಲಿ: ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಇಂದು ಅಂಬಾಲ ವಾಯುನೆಲೆಗೆ ಬಂದಿಳಿಯಲಿವೆ. ಫ್ರಾನ್ಸಿನಿಂದ ಸಿಂಗಲ್ ಟೇಕ್ ಆಫ್ನಲ್ಲಿ ಈ ಯುದ್ಧ ವಿಮಾನ ಭಾರತಕ್ಕೆ ಬಂದಿಳಿಯಲಿದ್ದು, ಎಲ್ಲೂ ನಿಲುಗಡೆಯಾಗುವುದಿಲ್ಲ.
ರಫೇಲ್ ಜೆಟ್ಗಳು ಇಂದು ಬೆಳಿಗ್ಗೆ ಫ್ರಾನ್ಸ್ನ ಇಸ್ಟ್ರೆಸ್ನಿಂದ ಹಾರಾಟ ನಡೆಸಿ ಸಂಜೆಯ ವೇಳೆಗೆ ಭಾರತದ ಜಾಮ್ನಗರ ತಲುಪಲಿವೆ. ಜೆಟ್ಗಳ ಜೊತೆಯಲ್ಲಿ ಫ್ರೆಂಚ್ ವಾಯುಪಡೆಯ ಮಿಡ್-ಏರ್ ಇಂಧನ ತುಂಬುವ ವಿಮಾನಗಳು ಇರಲಿವೆ.
ಜೆಟ್ಗಳನ್ನು ಹಾರಿಸಲಿರುವ ಐಎಎಫ್ ಪೈಲಟ್ಗಳಿಗೆ ಯುರೋಪಿಯನ್ ರಾಷ್ಟ್ರದ ಸೇಂಟ್-ಡಿಜಿಯರ್ ವಾಯುನೆಲೆಯಲ್ಲಿ ಬ್ಯಾಚ್ಗಳಲ್ಲಿ ತರಬೇತಿ ನೀಡಲಾಗಿದೆ.
ಭಾರತವು ಈಗಾಗಲೇ ಐದು ರಫೇಲ್ ಜೆಟ್ಗಳನ್ನು ಹೊಂದಿದೆ ಮತ್ತು ಇನ್ನೂ ಮೂರು ವಿಮಾನಗಳ ಪ್ರವೇಶವು ಭಾರತದ ರಕ್ಷಣೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಭಾರತವು ಈ ವರ್ಷದ ಜುಲೈನಲ್ಲಿ ಐದು ರಫೇಲ್ ಜೆಟ್ಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಿದೆ ಮತ್ತು ಅವುಗಳನ್ನು ಸೆಪ್ಟೆಂಬರ್ನಲ್ಲಿ ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಈ ಯುದ್ಧ ವಿಮಾನಗಳನ್ನು ಲಡಾಖ್ನ ಸಂಘರ್ಷ ವಲಯದಲ್ಲಿ ನಿಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.