ಕೋಲ್ಕತಾ: ಡೆಹ್ರಾಡೂನ್ನ ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು ಡ್ರೋನ್ ತಂತ್ರಜ್ಞಾನದ ಮೂಲಕ ಕಾಡುಗಳ ಸುತ್ತಮುತ್ತಲ ಪರಿಸರದಲ್ಲಿ ಮಾನವ ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ತಡೆಯಲು ಯೋಜನೆ ರೂಪಿಸಿದ್ದಾರೆ.
ಡ್ರೋನ್ಗಳು ವನ್ಯಜೀವಿಗಳ ಕಣ್ಗಾವಲಿನ ಜೊತೆ ಈ ಸಂಘರ್ಷವನ್ನೂ ಪರಿಹರಿಸಬಲ್ಲುದು. ಅರಣ್ಯಗಳ ಸುತ್ತ ಡ್ರೋನ್ಗಳ ಸಹಾಯದೊಂದಿಗೆ ಹುಲಿ, ಆನೆಗಳಂತಹ ಪ್ರಾಣಿಗಳು ಹಳ್ಳಿಗಳಿಗೆ ಬರುವುದನ್ನು ತಡೆಯಬಹುದು ಎಂದು ಭಾರತೀಯ ವನ್ಯಜೀವಿ ಸಂಸ್ಥೆ ವಿಜ್ಞಾನಿ ರಮೇಶ್ ತಿಳಿಸಿದ್ದಾರೆ. ಹಳ್ಳಿಗರು ಪ್ರಾಣಿಗಳನ್ನು ಕಂಡಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಲ್ಲಿ ಈ ಡ್ರೋನ್ಗಳ ಸಹಾಯದಿಂದ ಪತ್ತೆ ಹಚ್ಚಬಹುದು.
ಈ ತಂತ್ರಜ್ಞಾನವನ್ನು ಮಧ್ಯಪ್ರದೇಶದ ಪನ್ನಾ ಪ್ರದೇಶದಲ್ಲಿ ಪರೀಕ್ಷಿಸಲಾಗಿದೆ. ಪನ್ನಾ, ಕಾಜಿರಂಗ, ಸುಂದರ್ಬನ್, ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್, ಸತ್ಯಮಂಗಲಂ ಅರಣ್ಯಗಳಲ್ಲಿ ಇದನ್ನು ಪ್ರಥಮವಾಗಿ ಹಾರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.