ನವದೆಹಲಿ: ಒರಿಸ್ಸಾದಲ್ಲಿ ಲವ್ ಜಿಹಾದ್ ಪ್ರಕರಣವನ್ನು ಭೇದಿಸಿ ಯುವತಿಯೊಬ್ಬಳು ಮಾನವ ಕಳ್ಳಸಾಗಣೆಯಾಗುವುದನ್ನು ಬಜರಂಗ ದಳದ ಕಾರ್ಯಕರ್ತರು ತಪ್ಪಿಸಿದ್ದಾರೆ.
ಮರ್ಷಿದಾಬಾದಿನ ಸಬಿರ್ ಅಲಿ ಎಂಬಾತ ಹಿಂದೂ ಯುವತಿಯನ್ನು ಪ್ರೇಮದ ನೆಪದಲ್ಲಿ ಒರಿಸ್ಸಾದಿಂದ ಕರೆತಂದು ಪಶ್ಚಿಮ ಬಂಗಾಳದ ರೈಲಿನಲ್ಲಿ ಕಳುಹಿಸಿದ್ದ. ತಕ್ಷಣವೇ ಬಜರಂಗದಳದ ಕಾರ್ಯಕರ್ತರ ಮಧ್ಯಪ್ರವೇಶದಿಂದ ಮತ್ತು ರೈಲ್ವೆ ಪೊಲೀಸರ ಸಹಾಯದಿಂದ ಯುವತಿ ರಕ್ಷಿಸಲ್ಪಟ್ಟಿದ್ದಾಳೆ.
ಒರಿಸ್ಸಾದ ಜೈಪುರದಲ್ಲೇ ಬಜರಂಗದಳ ಕಾರ್ಯಕರ್ತರು ಸಬಿರ್ ಅಲಿಯನ್ನು ಪತ್ತೆ ಮಾಡಿದ್ದರು. ಈತ ಯುವತಿಯನ್ನು ಪಶ್ಚಿಮಬಂಗಾಳ ನಂತರ ದುಬೈಗೆ ಕಳುಹಿಸಿಕೊಡಲು ಯೋಜನೆ ರೂಪಿಸಿದ್ದ ಎಂದು ಹೇಳಲಾಗಿದೆ.
ಸಬೀರ್ ವೃತ್ತಿಪರ ಲವ್ ಜಿಹಾದಿ ಆಗಿದ್ದು, ತನ್ನ ಗುರುತನ್ನು ಮುಚ್ಚಿಟ್ಟು ಈತ ಹಿಂದೂ ಯುವತಿಯರನ್ನು ಪ್ರೇಮಪಾಶಕ್ಕೆ ಒಳಪಡಿಸಿ ನಂತರ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈತನಿಗೆ ಈಗಾಗಲೇ ಎರಡು ಮದುವೆಯಾಗಿದೆ ಎಂಬುದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.
ಈಗಾಗಲೇ ಈತ ಒಬ್ಬರು ಹಿಂದೂ ಯುವತಿಯರನ್ನು ಒರಿಸ್ಸಾದಿಂದ ಬೇರೆಡೆಗೆ ಕಳ್ಳಸಾಗಣೆ ಮಾಡಿದ್ದಾನೆ, ಅವರು ಎಲ್ಲಿದ್ದಾರೆ ಎಂಬುದು ಇನ್ನಷ್ಟೇ ಪತ್ತೆಯಾಗಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.