ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದ ಅಕ್ಟೋಬರ್ವರೆಗೆ ಭದ್ರತಾ ಪಡೆಗಳು ವಿವಿಧ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ 200 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ.
ಕಳೆದ ವರ್ಷ ಭದ್ರತಾ ಪಡೆಗಳು 12 ತಿಂಗಳಲ್ಲಿ 157 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ.
ಭದ್ರತಾ ಪಡೆಗಳು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಭಾರತೀಯ ಪಡೆಗಳಾದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್), ಭಾರತೀಯ ಸೇನೆ ಮತ್ತು ಜಮ್ಮು & ಕಾಶ್ಮೀರ ಪೊಲೀಸರು ಜೂನ್ನಲ್ಲಿ 49 ಭಯೋತ್ಪಾದಕರನ್ನು ಸಂಹಾರ ಮಾಡಿದ್ದಾರೆ, ಇದು ಒಂದೇ ತಿಂಗಳಲ್ಲಿ ನಡೆದ ಉಗ್ರ ಸಂಹಾರವಾಗಿದೆ. ಇದು ಹಿಂದಿನ ವರ್ಷಕ್ಕಿಂತ ದ್ವಿಗುಣವಾಗಿದೆ.
ಏಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 28 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ಜುಲೈ ಮತ್ತು ಅಕ್ಟೋಬರ್ನಲ್ಲಿ 21 ಭಯೋತ್ಪಾದಕರನ್ನು ಅಲ್ಲಿ ವಧಿಸಲಾಗಿದೆ.
ಅಂಕಿಅಂಶಗಳ ಪ್ರಕಾರ, ದಕ್ಷಿಣ ಕಾಶ್ಮೀರದಲ್ಲಿ ಅಕ್ಟೋಬರ್ವರೆಗೆ ಒಟ್ಟು 138 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ.
ಶೋಪಿಯಾನ್ ಮತ್ತು ಪುಲ್ವಾಮಾದಂತಹ ಪ್ರದೇಶಗಳು ಭಯೋತ್ಪಾದಕ ಗುಂಪುಗಳಿಗೆ ಸ್ಥಳೀಯ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿರುವ ಉದಾಹರಣೆಗಳನ್ನು ಕಂಡಿದ್ದು, ಇಲ್ಲಿ ಸುಮಾರು 98 ಭಯೋತ್ಪಾದಕ ವಿರೋಧಿ ಎನ್ಕೌಂಟರ್ಗಳು ನಡೆದಿವೆ.
ಭಾರತೀಯ ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಅತ್ಯಧಿಕ ಅಂದರೆ 72 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ. ಪಾಕಿಸ್ಥಾನ ಸೇನೆಯ ಬೆಂಬಲವನ್ನು ಈ ಭಯೋತ್ಪಾದಕ ಸಂಘಟನೆಗಳು ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.