ನವದೆಹಲಿ: ಸುಮಾರು 800 ಪೋರ್ನ್ ವೆಬ್ಸೈಟ್ಗಳಿಗೆ ನಿಷೇಧ ಹೇರುವಂತೆ ಸರ್ಕಾರ ಟೆಲಿಕಾಂ ಆಪರೇಟರ್ಗಳಿಗೆ, ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಗಳಿಗೆ ಸೂಚನೆ ನೀಡಿದೆ.
ಕಳೆದ ವಾರವೇ ನಿಷೇಧದ ಆದೇಶವನ್ನು ಈ ವೆಬ್ಸೈಟ್ಗಳಿಗೆ ಕಳುಹಿಸಲಾಗಿದೆ. ಹೀಗಾಗಿ ಸರ್ವಿಸ್ ಪ್ರೊವೈಡರ್ಗಳು ಪೋರ್ನ್ ವೆಬ್ಸೈಟ್ ಬ್ಲಾಕ್ ಮಾಡುವ ಕಾರ್ಯ ಆರಂಭಿಸಿದ್ದಾರೆ.
ಪೋರ್ನ್ ವೆಬ್ಸೈಟ್ಗಳನ್ನು ನಮ್ಮ ಸಿಸ್ಟಮ್ನಲ್ಲಿ ಓಪನ್ ಆಗುತ್ತಿಲ್ಲ ಎಂದು ಈಗಾಗಲೇ ಎಂಟಿಎನ್ಎಲ್, ಬಿಎಸ್ಎನ್ಎಲ್ ಮತ್ತು ಎಸಿಟಿ ಬ್ರಾಡ್ಬ್ಯಾಂಡ್ಗಳು ಘೋಷಿಸಿವೆ. ಆದರೆ ಏರ್ಟೆಲ್, ಟಾಟಾ ಫೋಟನ್, ಕೇಬಲ್ ಇಂಟರ್ನೆಟ್ ಗ್ರಾಹಕರಿಗೆ ಈಗಲೂ ಪೋರ್ನ್ ವೆಬ್ ಲಭ್ಯವಾಗಿದೆ ಎನ್ನಲಾಗುತ್ತಿದೆ.
ಪೋರ್ನ್ ವೆಬ್ಗಳನ್ನು ಅದರಲ್ಲೂ ಮುಖ್ಯವಾಗಿ ಮಕ್ಕಳ ಪೋರ್ನ್ಗಳನ್ನು ತಡೆಗಟ್ಟಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರ್ಕಾರ ಸುಪ್ರೀಂಗೆ ಭರವಸೆ ನೀಡಿತ್ತು.
ಚಲನ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪೋರ್ನ್ ನಿಷೇಧಕ್ಕೆ ಆಕ್ಷೇಪ ಎತ್ತಿದ್ದು, ಸರ್ಕಾರ ಇಸಿಸ್ ಮತ್ತು ತಾಲಿಬಾನ್ನಂತೆ ವರ್ತಿಸುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.