ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ಥಾನ ಸೇರಿದ ಭಾರತದ ಬಾಲೆಯೊಬ್ಬಳು ತಾಯ್ನಾಡಿಗೆ ಮರಳಲಾಗದೆ ಅಲ್ಲೇ ಒದ್ದಾಡುತ್ತಿರುವ ಘಟನೆಯೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದೀಗ ಆ ಬಾಲಕಿಯನ್ನು ವಾಪಾಸ್ ಕರೆತರುವ ಪ್ರಯತ್ನ ನಡೆಸುವುದಾಗಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.
ಕಿವಿ ಮತ್ತು ಮಾತು ಬಾರದ ಬಾಲಕಿ 9 ವರ್ಷದವಳಿದ್ದಾಗ ಗಡಿ ದಾಟಿ ಪಾಕ್ಗೆ ತೆರಳಿದ್ದಳು, ಪಂಜಾಬ್ನ ರೇಂಜರ್ಗಳ ಕಣ್ಣಿಗೆ ಬಿದ್ದ ಈಕೆಯನ್ನು ಅವರು ಸಮಾಜ ಕಲ್ಯಾಣ ಸಂಸ್ಥೆ ಇಧೀ ಫೌಂಡೇಶನ್ಗೆ ಸೇರಿಸಿದ್ದರು. ಸಾಮಾಜಿಕ ಕಾರ್ಯಕರ್ತರೊಬ್ಬರು ಆಕೆಗೆ ಗೀತಾ ಎಂದು ನಾಮಕರಣ ಮಾಡಿದರು. ಆಕೆಗಾಗಿ ಹಿಂದೂ ದೇವರ ಕೋಣೆಯನ್ನೂ ನಿರ್ಮಿಸಿದ್ದಾರೆ. ಇದೀಗ ಆಕೆಗೆ 23 ವರ್ಷ.
ಭಾರತಕ್ಕೆ ಮರಳಿಸುವ ಸಾಕಷ್ಟು ಪ್ರಯತ್ನ ಮಾಡಲಾಯಿತಾದರೂ ಬಾಲಕಿ ಸರಿಯಾದ ಸ್ಪಂದನೆ ನೀಡಿಲ್ಲ. ಭಾರತದ ಭೂಪಟವನ್ನು ಮಾತ್ರ ಈಕೆ ಗುರುತಿಸುತ್ತಾಳೆ. ಅದು ಬಿಟ್ಟರೆ 193 ಸಂಖ್ಯೆಯನ್ನು ಹೆಚ್ಚಾಗಿ ಬರೆಯುತ್ತಾಳೆ.
ಈಕೆಯನ್ನು ತಾಯ್ನಾಡಿಗೆ ವಾಪಾಸ್ ಕಳುಹಿಸುವ ಸಲುವಾಗಿ ಫೇಸ್ಬುಕ್ನಲ್ಲಿ ‘ಪ್ಲೀಸ್ ಹೆಲ್ಪ್ ಫೈಂಡ್ ಗೀತಾ’ಸ್ ಹೋಮ್’ ಎಂಬ ಅಭಿಯಾನವನ್ನೂ ಆರಂಭಿಸಲಾಗಿದೆ. ಮೊನ್ನೆ ತಾನೇ ಭಜರಂಗಿ ಬಾಯಿಜಾನ್ ಸಿನೆಮಾ ರಿಲೀಸ್ ಆಗಿತ್ತು. ಈ ಬಾಲಕಿ ಮತ್ತು ಆ ಸಿನೆಮಾದ ಕಥೆಗೆ ಸಾಕಷ್ಟು ಹೋಲಿಕೆ ಇದೆ. ಈ ಸಿನೆಮಾದ ಬಳಿಕವೇ ಆಕೆಯ ಬಗ್ಗೆ ಹೆಚ್ಚಿನ ವರದಿಗಳಾಗಿರುವುದು.
ಇದೀಗ ಸಚಿವ ಸುಷ್ಮಾ ಅವರು ಭಾರತದ ಹೈಕಮಿಷನರ್ ಅವರನ್ನು ಕರಾಚಿಗೆ ಕಳುಹಿಸಿ, ಆಕೆಯನ್ನು ಭಾರತಕ್ಕೆ ಕರೆತರುವ ಏರ್ಪಾಟು ಮಾಡುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.