ಉಡುಪಿ : ಮಲ್ಪೆ ಬಂದರು ಹಾಗೂ ಆಸುಪಾಸಿನ ಗ್ರಾಮಗಳ ಅಪಘಾತದ ತುರ್ತು ನಿರ್ವಹಣೆಗಾಗಿ ಸುಸಜ್ಜಿತ ಚಿಕಿತ್ಸಾ ಸಲಕರಣೆ ಹಾಗೂ ಆಕ್ಸಿಜನ್ ಅಳವಡಿಕೆಯುಳ್ಳ ಆಂಬುಲೆನ್ಸ್ ಅನ್ನು ರಾಜ್ಯ ಸರಕಾರ ನೀಡಿದೆ. ಆ್ಯಂಬುಲೆನ್ಸ್ ಸೇವೆಗೈಯಲು ಆ. 1 ರಂದು ಮಲ್ಪೆ ಬಂದರು ಮತ್ತು ಸಮಸ್ತ ಮೀನುಗಾರರ ಸಮಿತಿಗೆ ಹಸ್ತಾಂತರವಾಗಲಿದೆ.
ಈ ಸೇವಾ ಕೊಡುಗೆಯನ್ನು ನೀಡುವಲ್ಲಿ ಸಹಕರಿಸಿದ ರಾಜ್ಯದ ಸಿಎಂ ಸಿದ್ಧರಾಮಯ್ಯ, ಆರೋಗ್ಯ ಸಚಿವ ಯು.ಟಿ. ಖಾದರ್, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ಸಂಸದೆ ಶೋಭಾ ಕರಂದ್ಲಾಜೆ, ನಾಡೋಜ ಡಾ| ಜಿ. ಶಂಕರ್ ಹಾಗೂ ದ.ಕ. ಮೊಗವೀರ ಮಹಾಜನ ಸಂಘಕ್ಕೆ ಮಲ್ಪೆ ಅಭಿವೃದ್ಧಿ ಸಮಿತಿ ಅಭಿನಂದನೆ ಸಲ್ಲಿಸಿದೆ ಎಂದು ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಉಪಾಧ್ಯಕ್ಷ ಗಣೇಶ ವಿ. ಸಾಲ್ಯಾನ್ ತಿಳಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.