ನವದೆಹಲಿ: ಫ್ರೆಂಚ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್ ಅವರ ವಿರುದ್ಧ ನಡೆಸಲಾಗುತ್ತಿರುವ ವೈಯಕ್ತಿಕ ದಾಳಿಗಳನ್ನು ಭಾರತ ಖಂಡಿಸಿದೆ. ಅಲ್ಲದೇ, ಪ್ಯಾರಿಸ್ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿಗೂ ಖಂಡನೆ ವ್ಯಕ್ತಪಡಿಸಿದೆ. ಪ್ಯಾರಿಸ್ನಲ್ಲಿ ಇಸ್ಲಾಂ ಮೂಲಭೂತವಾದಿಗಳು ಪ್ರವಾದಿ ಮೊಹಮ್ಮದ್ ಕಾರ್ಟೂನ್ ಅನ್ನು ತೋರಿಸಿದ್ದ ಶಿಕ್ಷಕನನ್ನು ಶಿರಚ್ಛೇಧ ಮಾಡಿದ್ದರು.
ಈ ಘಟನೆಯನ್ನು ಮ್ಯಾಕ್ರೋನ್ ಕಟುವಾಗಿ ಖಂಡಿಸಿದ್ದಾರೆ ಮತ್ತು ಇಸ್ಲಾಂ ಮೂಲಭೂತವಾದಿಗಳ ವಿರುದ್ಧದ ಸಮರವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇದು ಕೆಲವು ಇಸ್ಲಾಂ ರಾಷ್ಟ್ರಗಳ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಫ್ರಾನ್ಸ್ನೊಂದಿಗೆ ಸಂಬಂಧ ಕಡಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಟರ್ಕಿ ಮತ್ತು ಪಾಕಿಸ್ಥಾನ ಮ್ಯಾಕ್ರೋನ್ ವಿರುದ್ಧ ಬಹಿರಂಗವಾಗಿ ಕಿಡಿಕಾರಿದೆ.
ಈ ಸಂದರ್ಭದಲ್ಲಿ ಭಾರತ ಮ್ಯಾಕ್ರೋನ್ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿದೆ. “ಮ್ಯಾಕ್ರೋನ್ ಅವರ ಮೇಲೆ ಸ್ವೀಕಾರ್ಹವಲ್ಲದ ಭಾಷೆಯಲ್ಲಿ ವೈಯಕ್ತಿಕ ದಾಳಿಗಳನ್ನು ನಡೆಸುವುದು ಅಂತಾರಾಷ್ಟ್ರೀಯ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಭಾರತ ಇದನ್ನು ವಿರೋಧಿಸುತ್ತದೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.
“ಫ್ರೆಂಚ್ ಶಿಕ್ಷಕನನ್ನು ವಿಶ್ವವೇ ಬೆಚ್ಚಿಬೀಳುವಂತೆ ಅಮಾನವೀಯ ರೀತಿಯಲ್ಲಿ ಶಿರಚ್ಛೇಧ ಮಾಡಿದ ಕ್ರೂರ ಭಯೋತ್ಪಾದನೆಯನ್ನು ಭಾರತ ಖಂಡಿಸುತ್ತದೆ” ಎಂದಿದೆ.
“ಯಾವುದೇ ಕಾರಣಕ್ಕಾಗಿ ಅಥವಾ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.