ನವದೆಹಲಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ವೈ) ಯ ಯಶಸ್ವಿ ಅನುಷ್ಠಾನದಲ್ಲಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯು ದೇಶದ 30 ಜಿಲ್ಲೆಗಳ ಪೈಕಿ ಅಗ್ರ ಸ್ಥಾನವನ್ನು ಗಳಿಸಿದೆ. ಪಿಎಂಜಿಎಸ್ವೈ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಹಿಮಾಚಲ ಪ್ರದೇಶ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ಗಳಿಸಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪಿಎಂಜಿಎಸ್ವೈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಸಾಧನೆ ಮಾಡಿದ ದೇಶದ ಉನ್ನತ 30 ಜಿಲ್ಲೆಗಳ ಪಟ್ಟಿಯನ್ನು ಘೋಷಿಸಿದೆ.
2020-21ರಲ್ಲಿ ಎಂಜಿಎಸ್ವೈ ಅಡಿಯಲ್ಲಿ ಗರಿಷ್ಠ ಉದ್ದದ ರಸ್ತೆಗಳನ್ನು ನಿರ್ಮಿಸಿ ಮಂಡಿ ಜಿಲ್ಲೆಯು ಉನ್ನತ ಸ್ಥಾನವನ್ನು ಪಡೆದಿದೆ. ಹಿಮಾಚಲ ಪ್ರದೇಶದ ಇನ್ನೂ ಆರು ಜಿಲ್ಲೆಗಳು ಚಂಬಾ, ಶಿಮ್ಲಾ, ಕಾಂಗ್ರಾ, ಉನಾ, ಸಿರ್ಮೌರ್, ಹಮೀರ್ಪುರ ಮತ್ತು ಸೋಲನ್ ಅತ್ಯುತ್ತಮ 30 ಜಿಲ್ಲೆಗಳ ಪೈಕಿ ಸ್ಥಾನ ಪಡೆದಿವೆ.
ಈ ವರ್ಷ ಏಪ್ರಿಲ್ನಿಂದ ಇಲ್ಲಿಯವರೆಗೆ 1104 ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸುವ ಮೂಲಕ ರಾಜ್ಯವು ಪಿಎಂಜಿಎಸ್ವೈ ಕಾರ್ಯಕ್ರಮದಡಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿದೆ. ಪಿಎಂಜಿಎಸ್ವೈ ರಾಜ್ಯದಲ್ಲಿ 250 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ವಾಸಸ್ಥಳಗಳನ್ನು ಸಂಪರ್ಕಿಸಲು ಕೇಂದ್ರ ಸರ್ಕಾರವು ಧನಸಹಾಯ ನೀಡುವ ಕಾರ್ಯಕ್ರಮವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.