ಲಂಡನ್: ಬಾಲಕಿಯರ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಮತ್ತು ಭಾರತದಲ್ಲಿ ತ್ವರಿತ-ಸ್ಪಂದನೆಯ (quick-response) ಕೋಡೆಡ್ ಪಠ್ಯಕ್ರಮ ಕ್ರಾಂತಿಯನ್ನು ಪ್ರಚೋದಿಸುವಲ್ಲಿ ಮಹತ್ವದ ಪ್ರಯತ್ನಗಳನ್ನು ನಡೆಸಿದ ಮಹಾರಾಷ್ಟ್ರದ ಹಳ್ಳಿಯೊಂದರ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಯುಎಸ್ಡಿ ಒಂದು ಮಿಲಿಯನ್ ವಾರ್ಷಿಕ ಜಾಗತಿಕ ಶಿಕ್ಷಕ ಪ್ರಶಸ್ತಿ 2020 ಟಾಪ್ 10 ಫೈನಲಿಸ್ಟ್ಗಳ ಪಟ್ಟಿಗೆ ಪ್ರವೇಶ ಪಡೆದಿದ್ದಾರೆ.
31ರ ಹರೆಯದ ರಂಜಿತ್ಸಿನ್ಹ್ ಡಿಸಾಲೆ 2009ರಲ್ಲಿ ಮಹಾರಾಷ್ಟ್ರ ಸೋಲಾಪುರ ಜಿಲ್ಲೆಯ ಪರಿತೇವಾಡಿ ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಗೆ ಆಗಮಿಸಿದಾಗ ಅದು ಶಿಥಿಲಗೊಂಡ ಕಟ್ಟಡವಾಗಿತ್ತು, ದನದ ಕೊಟ್ಟಿಗೆ ಮತ್ತು ಸ್ಟೋರ್ ರೂಂ ನಡುವೆ ಶಾಲೆ ಇತ್ತು. ಆದರೆ ಬಳಿಕ ಅಲ್ಲಿ ಅವರು ಮಾಡಿದ ಕಾರ್ಯಗಳು ಎಲ್ಲರನ್ನು ಮಂತ್ರಮುಗ್ಧಗೊಳಿಸಿವೆ.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಸ್ಥಳೀಯ ಭಾಷೆಯಲ್ಲಿ ಲಭ್ಯವಾಗುವಂತೆ ಅವರು ನೋಡಿಕೊಂಡಿದ್ದಾರೆ. ಮಾತೃಭಾಷೆಗೆ ಪಠ್ಯಪುಸ್ತಕಗಳನ್ನು ಅನುವಾದಿಸಿದ್ದಾರೆ. ವಿದ್ಯಾರ್ಥಿಗಳಿಗೆ ಆಡಿಯೋ ಕವನಗಳು, ವಿಡಿಯೋ ಉಪನ್ಯಾಸಗಳು, ಕಥೆಗಳು ಮತ್ತು ಕ್ರಿಯಾಯೋಜನೆಗೆ ಪ್ರವೇಶ ಪಡೆಯಲು ಅನನ್ಯ ಕ್ಯೂಆರ್ ಸಂಕೇತಗಳನ್ನು ಸಂಯೋಜಿಸಿದ್ದಾರೆ.
ಆ ಗ್ರಾಮದಲ್ಲಿ ಬಾಲ್ಯವಿವಾಹ ಆಗದಂತೆ ತಡೆದಿದ್ದಾರೆ. ಶಾಲೆಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿ ಶೇಕಡ ನೂರರಷ್ಟು ಇರುವುದನ್ನು ಖಚಿತ ಪಡಿಸಿದ್ದಾರೆ.
ಅವರ ಈ ಅನನ್ಯ ಸಾಧನೆಗಾಗಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲು ಅಂತಿಮ ಪಟ್ಟಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಾಗಿ 12000 ನಾಮನಿರ್ದೇಶನಗಳು ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.